Hadith for the World
Tap the image to view it full size
ಸದ್ಗುಣಗಳು ಮತ್ತು ನಡವಳಿಕೆಗಳು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 45 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಷ್ಟೋ ಬಾಗಿಲುಗಳಿಂದ, ಕೆದರಿದ ಕೂದಲಿನ ದೂಡಲ್ಪಟ್ಟ ವ್ಯಕ್ತಿಗಳಿದ್ದಾರೆ. ಒಂದು ವೇಳೆ ಅವನು ಅಲ್ಲಾಹನ ಮೇಲೆ ಆಣೆಯಿಟ್ಟರೆ, ಅವನು (ಅಲ್ಲಾಹು) ಖಂಡಿತವಾಗಿಯೂ ಅದನ್ನು ಪೂರ್ಣಗೊಳಿಸುತ್ತಾನೆ".»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಜನರಲ್ಲಿ ಕೆಲವರು ಕೆದರಿದ ಮತ್ತು ಧೂಳು ತುಂಬಿದ ಕೂದಲಿನವರಾಗಿರುತ್ತಾರೆ. ಅವರು ಅದಕ್ಕೆ ಎಣ್ಣೆ ಹಚ್ಚುವುದಿಲ್ಲ ಅಥವಾ ಅತಿಯಾಗಿ ತೊಳೆಯುವುದಿಲ್ಲ. ಜನರ ದೃಷ್ಟಿಯಲ್ಲಿ ಅವರಿಗೆ ಯಾವುದೇ ಸ್ಥಾನಮಾನವಿರುವುದಿಲ್ಲ. ಅವರು ಅವರನ್ನು ತಮ್ಮ ಬಾಗಿಲುಗಳಿಂದ ದೂಡುತ್ತಾರೆ ಮತ್ತು ತಿರಸ್ಕಾರದಿಂದ ಓಡಿಸುತ್ತಾರೆ. ಆದರೆ, ಒಂದು ವೇಳೆ ಅವನು ಏನಾದರೂ ಸಂಭವಿಸಲಿ ಎಂದು ಆಣೆಯಿಟ್ಟರೆ, ಅಲ್ಲಾಹು ಅವನ ಕೋರಿಕೆಯನ್ನು ಈಡೇರಿಸುವ ಮೂಲಕ ಮತ್ತು ಅವನ ಆಣೆಯು ಸುಳ್ಳಾಗದಂತೆ ಅವನನ್ನು ರಕ್ಷಿಸುವ ಮೂಲಕ, ಅವನನ್ನು ಗೌರವಿಸಿ ಅದನ್ನು ಸಂಭವಿಸುವಂತೆ ಮಾಡುತ್ತಾನೆ. ಇದು ಅಲ್ಲಾಹನ ಬಳಿ ಅವನಿಗಿರುವ ಶ್ರೇಷ್ಠತೆ ಮತ್ತು ಸ್ಥಾನಮಾನದ ಕಾರಣದಿಂದಾಗಿದೆ.

Source
رواه مسلم
Download image

Saved at original quality