Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:

Available in 49 languages
«ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಿತ್ರ್ ಝಕಾತನ್ನು ಒಂದು ಸಾಅ್ ಖರ್ಜೂರ ಅಥವಾ ಒಂದು ಸಾಅ್ ಬಾರ್ಲಿಯಂತೆ ಗುಲಾಮರು, ಸ್ವತಂತ್ರರು, ಪುರುಷರು, ಸ್ತ್ರೀಯರು, ಕಿರಿಯರು, ಹಿರಿಯರು ಮುಂತಾದ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಿದರು. ಜನರು ನಮಾಝ್‌ಗೆ ಹೊರಡುವ ಮೊದಲು ಅದನ್ನು ನೀಡಬೇಕೆಂದು ಅವರು ಆದೇಶಿಸಿದರು."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ಮುಗಿದ ಬಳಿಕ ಫಿತ್ರ್ ಝಕಾತ್ ನೀಡುವುದನ್ನು ಕಡ್ಡಾಯಗೊಳಿಸಿದರು. ಇದರ ಪ್ರಮಾಣ ಒಂದು ಸಾಅ್, ಇದು ತೂಕದಲ್ಲಿ ನಾಲ್ಕು ಮುದ್ದ್‌ಗೆ ಸಮನಾಗಿದೆ. ಒಂದು ಮುದ್ದ್ ಎಂದರೆ ಸರಾಸರಿ ಗಾತ್ರದ ವ್ಯಕ್ತಿಯ ಎರಡು ಕೈಬೊಗಸೆಗಳು ತುಂಬವಷ್ಟು ಖರ್ಜೂರ ಅಥವಾ ಬಾರ್ಲಿ. ಇದು ಸ್ವತಂತ್ರ, ಗುಲಾಮ, ಪುರುಷ, ಸ್ತ್ರೀ, ಕಿರಿಯ, ಹಿರಿಯ ಎಂಬ ವ್ಯತ್ಯಾಸವಿಲ್ಲದೆ ಎಲ್ಲ ಮುಸ್ಲಿಮರಿಗೂ ಕಡ್ಡಾಯವಾಗಿದೆ. ಇದು ತನಗೆ ಮತ್ತು ತಾನು ಆಹಾರ ನೀಡಬೇಕಾದವರಿಗೆ ಒಂದು ದಿನ ಮತ್ತು ರಾತ್ರಿಯ ಅಗತ್ಯಗಳನ್ನು ಮೀರಿ ಹೆಚ್ಚು ಆಹಾರವಸ್ತುಗಳನ್ನು ಹೊಂದಿರುವವರಿಗೆ ಅನ್ವಯಿಸುತ್ತದೆ. ಜನರು ಈದ್ ನಮಾಝ್‌ಗೆ ಹೊರಡುವ ಮೊದಲು ಇದನ್ನು ನೀಡಬೇಕೆಂದು ಅವರು ಆಜ್ಞಾಪಿಸಿದರು.

Source
متفق عليه
Download image

Saved at original quality