Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:

Available in 49 languages
«ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನೀವು ರಮದಾನ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸಬಾರದು. ಆದರೆ ವಾಡಿಕೆಯ ಉಪವಾಸವನ್ನು ಆಚರಿಸುವವನ ಹೊರತು. ಅವನು ಅದನ್ನು ಆಚರಿಸಬಹುದು."»

Meaning translation ·

Explanation

The meaning in a few plain lines

ರಮದಾನ್ ತಿಂಗಳ ಬಗ್ಗೆ ಮುನ್ನೆಚ್ಚರಿಕೆಯಾಗಿ ರಮದಾನ್ ತಿಂಗಳಿಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಡೆದಿದ್ದಾರೆ. ಏಕೆಂದರೆ, ರಮದಾನ್ ಉಪವಾಸದ ಕಡ್ಡಾಯವು ಚಂದ್ರ ದರ್ಶನದ ಮೇಲೆ ಆಧಾರಿತವಾಗಿದೆ. ಇಲ್ಲಿ ಅನಗತ್ಯವಾಗಿ ಹೊರೆ ಹೊರಬೇಕಾದ ಅಗತ್ಯವಿಲ್ಲ. ಆದರೆ, ಯಾರಾದರೂ ವಾಡಿಕೆಯ ಉಪವಾಸವನ್ನು ಆಚರಿಸುತ್ತಿದ್ದರೆ, ಉದಾಹರಣೆಗೆ ದಿನ ಬಿಟ್ಟು ದಿನ ಉಪವಾಸ ಆಚರಿಸುವುದು, ಅಥವಾ ಸೋಮವಾರ ಅಥವಾ ಗುರುವಾರಗಳಂದು ಉಪವಾಸ ಆಚರಿಸುವುದು ಇತ್ಯಾದಿ, ಮತ್ತು ಈ ಉಪವಾಸಗಳು ಆ ದಿನಗಳಿಗೆ ಹೊಂದಿಕೆಯಾದರೆ, ಅವರು ಆ ದಿನಗಳಲ್ಲಿ ಉಪವಾಸ ಆಚರಿಸಬಹುದು. ಏಕೆಂದರೆ, ಇದನ್ನು ರಮದಾನ್ ತಿಂಗಳನ್ನು ನಿರೀಕ್ಷಿಸುವುದರ ಒಂದು ಭಾಗವೆಂದು ಪರಿಗಣಿಸಲಾಗುವುದಿಲ್ಲ. ಇದು ತಪ್ಪಿ ಹೋದ ಉಪವಾಸಗಳು, ಹರಕೆಯ ಉಪವಾಸಗಳು ಮುಂತಾದ ಕಡ್ಡಾಯ ಉಪವಾಸಗಳನ್ನು ಕಝಾ ನಿರ್ವಹಿಸುವುದಕ್ಕೂ ಅನ್ವಯಿಸುತ್ತದೆ.

Source
متفق عليه
Download image

Saved at original quality