Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:

Available in 36 languages
«ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಜನರು ಗುಂಪುಗೂಡಿ ಒಬ್ಬ ವ್ಯಕ್ತಿಗೆ ನೆರಳು ನೀಡುತ್ತಿರುವುದನ್ನು ಕಂಡರು. ಅವರು (ಪ್ರವಾದಿ) ಕೇಳಿದರು: "ಇದೇನು?". ಜನರು ಹೇಳಿದರು: "ಆತ ಉಪವಾಸದಲ್ಲಿದ್ದಾನೆ". ಆಗ ಅವರು (ಪ್ರವಾದಿ) ಹೇಳಿದರು: "ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ". ಇಮಾಮ್ ಮುಸ್ಲಿಂ ರವರ ಇನ್ನೊಂದು ವರದಿಯಲ್ಲಿ ಹೀಗಿದೆ: "ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು ಸ್ವೀಕರಿಸಿಕೊಳ್ಳಿರಿ".»

Meaning translation ·

Explanation

The meaning in a few plain lines

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಒಬ್ಬ ವ್ಯಕ್ತಿಯನ್ನು ಕಂಡರು, ಜನರು ಅವನ ಸುತ್ತಲೂ ಒಟ್ಟುಗೂಡಿದ್ದರು ಮತ್ತು ಬಿಸಿಲಿನ ತಾಪ ಹಾಗೂ ತೀವ್ರ ಬಾಯಾರಿಕೆಯಿಂದಾಗಿ ಅವನಿಗೆ ನೆರಳು ನೀಡುತ್ತಿದ್ದರು. ಆಗ ಅವರು (ಪ್ರವಾದಿ) ಕೇಳಿದರು: ಅವನಿಗೆ ಏನಾಗಿದೆ? ಜನರು ಹೇಳಿದರು: ಅವನು ಉಪವಾಸದಲ್ಲಿದ್ದಾನೆ. ಅವರು (ಪ್ರವಾದಿ) ಹೇಳಿದರು: ಪ್ರಯಾಣದಲ್ಲಿ (ಹೀಗೆ ಕಷ್ಟಪಟ್ಟು) ಉಪವಾಸ ಆಚರಿಸುವುದು ಪುಣ್ಯವಲ್ಲ. ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು (ಅಂದರೆ ಪ್ರಯಾಣದಲ್ಲಿ ಉಪವಾಸ ಬಿಡುವುದನ್ನು) ಸ್ವೀಕರಿಸಿಕೊಳ್ಳಿ.

Source
متفق عليه
Download image

Saved at original quality