ಸದ್ಗುಣಗಳು ಮತ್ತು ನಡವಳಿಕೆಗಳು
ಶದ್ದಾದ್ ಬಿನ್ ಔಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
Available in 60 languages
«ಶದ್ದಾದ್ ಬಿನ್ ಔಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ ಯಾವುದೆಂದರೆ ನೀವು ಹೀಗೆ ಪಠಿಸುವುದು: ಓ ಅಲ್ಲಾಹ್! ನೀನೇ ನನ್ನ ಪರಿಪಾಲಕ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನಾನು ನನಗೆ ಸಾಧ್ಯವಾದಷ್ಟು ನಿನ್ನ ಕರಾರು ಮತ್ತು ವಾಗ್ದಾನಕ್ಕೆ ನಿಷ್ಠನಾಗಿರುತ್ತೇನೆ. ನಾನು ಮಾಡಿದ ಪಾಪಗಳ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನ್ನ ಮೇಲಿರುವ ನಿನ್ನ ಅನುಗ್ರಹಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಮಾಡಿದ ಪಾಪಗಳನ್ನೂ ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು. ಏಕೆಂದರೆ, ನಿಶ್ಚಯವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ." ಅವರು (ಪ್ರವಾದಿ) ಮುಂದುವರಿದು ಹೇಳಿದರು: "ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ಹಗಲಿನಲ್ಲಿ ಪಠಿಸಿ, ನಂತರ ಅದೇ ದಿನ ಸಂಜೆಯಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ. ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ರಾತ್ರಿಯಲ್ಲಿ ಪಠಿಸಿ, ನಂತರ ಬೆಳಗಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ."»Meaning translation ·
Saved at original quality








