Hadith for the World
Tap the image to view it full size
ಅಕೀದಾ

ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:

Available in 62 languages
«ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳಿದಂತೆಯೇ ಹೇಳಿರಿ. ನಂತರ ನನ್ನ ಮೇಲೆ ಸಲಾತ್ ಹೇಳಿರಿ. ಏಕೆಂದರೆ ಯಾರು ನನ್ನ ಮೇಲೆ ಒಂದು ಸಲಾತ್ ಹೇಳುತ್ತಾರೋ, ಅಲ್ಲಾಹು ಅವರ ಮೇಲೆ ಹತ್ತು ಸಲಾತ್‌ಗಳನ್ನು ಹೇಳುತ್ತಾನೆ. ನಂತರ ಅಲ್ಲಾಹನಲ್ಲಿ ನನಗಾಗಿ 'ವಸೀಲ'ವನ್ನು ಬೇಡಿರಿ. ಅದು ಸ್ವರ್ಗದಲ್ಲಿರುವ ಒಂದು ಸ್ಥಾನಮಾನವಾಗಿದೆ. ಅದು ಅಲ್ಲಾಹನ ದಾಸರಲ್ಲಿ ಒಬ್ಬರಿಗೆ ಮಾತ್ರ ಸಿಗುತ್ತದೆ. ಅದು ನನಗೆ ಸಿಗಬೇಕೆಂದು ನಾನು ಆಶಿಸುತ್ತೇನೆ. ಯಾರು ನನಗೋಸ್ಕರ 'ವಸೀಲ' ಬೇಡುತ್ತಾರೋ ಅವರಿಗೆ ನನ್ನ ಶಿಫಾರಸ್ಸು ದೊರೆಯುತ್ತದೆ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಲಿಸಿಕೊಡುವುದೇನೆಂದರೆ, ಮುಅಝ್ಝಿನ್ ನಮಾಝಿಗಾಗಿ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳುವ ವಾಕ್ಯಗಳನ್ನು ಹಾಗೆಯೇ ಪುನರುಚ್ಛರಿಸಬೇಕು. ಆದರೆ ಮುಅಝ್ಝಿನ್ "ಹಯ್ಯ ಅಲಸ್ಸಲಾಹ್" ಮತ್ತು "ಹಯ್ಯ ಅಲಲ್ ಫಲಾಹ್" ಎಂದು ಹೇಳುವಾಗ, "ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್" ಎಂದು ಹೇಳಬೇಕು. ಅಝಾನ್ ಮುಗಿದ ತಕ್ಷಣ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳಬೇಕು. ಏಕೆಂದರೆ ಅವರ ಮೇಲೆ ಒಂದು ಸಲಾತ್ ಹೇಳುವವರ ಮೇಲೆ ಅಲ್ಲಾಹು ಹತ್ತು ಸಲಾತ್‌ಗಳನ್ನು ಹೇಳುತ್ತಾನೆ. ಅಲ್ಲಾಹು ಸಲಾತ್ ಹೇಳುವುದು ಎಂದರೆ, ದೇವದೂತರ ಬಳಿ ಅವರನ್ನು ಪ್ರಶಂಸಿಸುವುದು. ನಂತರ ತನಗೋಸ್ಕರ 'ವಸೀಲ' ಬೇಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸುತ್ತಾರೆ. ಅದು ಸ್ವರ್ಗದಲ್ಲಿರುವ ಒಂದು ಉನ್ನತ ಸ್ಥಾನವಾಗಿದೆ. ಅದು ಅಲ್ಲಾಹನ ಸಂಪೂರ್ಣ ಸೃಷ್ಟಿಗಳ ಪೈಕಿ ಕೇವಲ ಒಬ್ಬರಿಗೆ ಮಾತ್ರ ದೊರೆಯುತ್ತದೆ. ಆ ಸ್ಥಾನ ಅವರಿಗೆ ಸಿಗಬೇಕೆಂದು ಅವರು ಆಶಿಸುತ್ತಾರೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಹೇಳಿದ್ದು ಅವರ ವಿನಯದಿಂದಾಗಿದೆ. ಏಕೆಂದರೆ, ಅಂತಹ ಉನ್ನತ ಸ್ಥಾನವು ಕೇವಲ ಒಬ್ಬರಿಗೆ ಮಾತ್ರ ಸಿಗುವುದಾದರೆ, ಆ ಒಬ್ಬರು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾತ್ರವಾಗಿರಲು ಸಾಧ್ಯ. ಏಕೆಂದರೆ ಅವರು ಸೃಷ್ಟಿಗಳಲ್ಲೇ ಶ್ರೇಷ್ಠರಾಗಿದ್ದಾರೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದೇನೆಂದರೆ, ಯಾರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಸೀಲ' ಸಿಗಬೇಕೆಂದು ಪ್ರಾರ್ಥಿಸುತ್ತಾರೋ ಅವರಿಗೆ ಅವರ ಶಿಫಾರಸ್ಸು ದೊರೆಯುತ್ತದೆ.

Source
رواه مسلم
Download image

Saved at original quality