Hadith for the World
ನಮಾಝ್

The Azan and Iqaamah

6 hadiths

6 hadiths

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಝಾನ್ ಕೇಳಿದರೆ ಮುಅಝ್ಝಿನ್ ಹೇಳುವಂತೆಯೇ ಹೇಳಿರಿ."متفق عليه
ಸಅದ್ ಬಿನ್ ಅಬೂ ವಕ್ಕಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ."رواه مسلم
عن أبي هريرة رضي الله عنه قال: قال رسول الله صلى الله عليه وسلم : «إِذَا نُودِيَ بالصَّلاَةِ، أدْبَرَ الشَّيْطَانُ، وَلَهُ ضُرَاطٌ حَتَّى لاَ يَسْمَعَ التَّأذِينَ، فَإذَا قُضِيَ النِّدَاءُ أقْبَلَ، حَتَّى إِذَا ثُوِّبَ للصَّلاةِ أدْبَرَ، حَتَّى إِذَا قُضِيَ التَّثْوِيبُ أقْبَلَ، حَتَّى يَخْطِرَ بَيْنَ المَرْءِ وَنَفْسِهِ، يَقُولُ: اذْكُرْ كَذَا واذكر كَذَا - لِمَا لَمْ يَذْكُر مِنْ قَبْلُ - حَتَّى يَظَلَّ الرَّجُلُ مَا يَدْرِي كَمْ صَلَّى».متفق عليه
ಮುಆವಿಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ: "ಮುಅದ್ದಿನ್‌ಗಳು (ಅಝಾನ್ ಹೇಳುವವರು) ಪುನರುತ್ಥಾನ ದಿನದಂದು ಜನರಲ್ಲಿ ಅತ್ಯಂತ ಉದ್ದವಾದ ಕುತ್ತಿಗೆಯುಳ್ಳವರಾಗಿರುತ್ತಾರೆ".رواه مسلم
ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಝಾನ್ ಕೇಳಿದಾಗ, 'ಓ ಅಲ್ಲಾಹ್, ಈ ಪರಿಪೂರ್ಣ ಕರೆಯ ಮತ್ತು ಸಂಸ್ಥಾಪಿಸಲಾದ ನಮಾಝ್‌ನ ಪರಿಪಾಲಕನೇ, ಮುಹಮ್ಮದ್‌ರಿಗೆ ವಸೀಲ (ಸ್ವರ್ಗದಲ್ಲಿ ಒಂದು ಉನ್ನತ ಸ್ಥಾನ) ಮತ್ತು ಫಝೀಲ (ಘನತೆ) ವನ್ನು ನೀಡು. ನೀನು ಅವರಿಗೆ ಭರವಸೆ ನೀಡಿದ ಸ್ತುತ್ಯರ್ಹ ಸ್ಥಾನಕ್ಕೆ (ಮಕಾಮೆ ಮಹ್ಮೂದ್) ಅವರನ್ನು ಕಳುಹಿಸು' ಎಂದು ಪ್ರಾರ್ಥಿಸುತ್ತಾರೋ, ಅವರಿಗೆ ಪುನರುತ್ಥಾನ ದಿನದಂದು ನನ್ನ ಶಿಫಾರಸ್ಸು (ಶಫಾಅತ್) ಖಚಿತವಾಗಿ ದೊರೆಯುತ್ತದೆ."رواه البخاري
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಮುಅಝ್ಝಿನ್ ಅಝಾನ್ ನೀಡುವುದನ್ನು ಕೇಳಿದರೆ, ಅವರು ಹೇಳಿದಂತೆಯೇ ಹೇಳಿರಿ. ನಂತರ ನನ್ನ ಮೇಲೆ ಸಲಾತ್ ಹೇಳಿರಿ. ಏಕೆಂದರೆ ಯಾರು ನನ್ನ ಮೇಲೆ ಒಂದು ಸಲಾತ್ ಹೇಳುತ್ತಾರೋ, ಅಲ್ಲಾಹು ಅವರ ಮೇಲೆ ಹತ್ತು ಸಲಾತ್‌ಗಳನ್ನು ಹೇಳುತ್ತಾನೆ. ನಂತರ ಅಲ್ಲಾಹನಲ್ಲಿ ನನಗಾಗಿ 'ವಸೀಲ'ವನ್ನು ಬೇಡಿರಿ. ಅದು ಸ್ವರ್ಗದಲ್ಲಿರುವ ಒಂದು ಸ್ಥಾನಮಾನವಾಗಿದೆ. ಅದು ಅಲ್ಲಾಹನ ದಾಸರಲ್ಲಿ ಒಬ್ಬರಿಗೆ ಮಾತ್ರ ಸಿಗುತ್ತದೆ. ಅದು ನನಗೆ ಸಿಗಬೇಕೆಂದು ನಾನು ಆಶಿಸುತ್ತೇನೆ. ಯಾರು ನನಗೋಸ್ಕರ 'ವಸೀಲ' ಬೇಡುತ್ತಾರೋ ಅವರಿಗೆ ನನ್ನ ಶಿಫಾರಸ್ಸು ದೊರೆಯುತ್ತದೆ."رواه مسلم