Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 62 languages
«ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ನಮಾಝನ್ನು ಮರೆತುಬಿಟ್ಟರೆ ನೆನಪಾದಾಗ ಅದನ್ನು ನಿರ್ವಹಿಸಲಿ. ಇದಲ್ಲದೆ ಅದಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲ. "ನನ್ನ ನೆನಪಿಗಾಗಿ ನಮಾಝ್ ನಿರ್ವಹಿಸಿರಿ." [ತ್ವಾಹಾ 14]"»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರಾದರೂ ಕಡ್ಡಾಯ ನಮಾಝನ್ನು ನಿರ್ವಹಿಸಲು ಅದರ ಸಮಯವು ಮುಗಿಯುವ ತನಕ ಮರೆತುಬಿಟ್ಟರೆ, ಅದರ ನೆನಪಾದಾಗ ಅದನ್ನು ನಿರ್ವಹಿಸಲು ತ್ವರೆ ಮಾಡಲಿ. ಮರೆವಿನಿಂದಾಗಿ ನಮಾಝನ್ನು ತೊರೆದವರು ಆ ತಪ್ಪಿಗಾಗಿ ಅದು ನೆನಪಾದಾಗ ನಿರ್ವಹಿಸುವುದಲ್ಲದೆ ಅದಕ್ಕೆ ಬೇರೆ ಪರಿಹಾರವಿಲ್ಲ. ಅಲ್ಲಾಹು ಪವಿತ್ರ ಕುರ್‌ಆನಿನಲ್ಲಿ ಹೇಳುತ್ತಾನೆ: "ನನ್ನ ನೆನಪಿಗಾಗಿ ನಮಾಝ್ ನಿರ್ವಹಿಸಿರಿ." [ತ್ವಾಹಾ 14]. ಅಂದರೆ, ಮರೆತುಹೋದ ನಮಾಝನ್ನು ನೆನಪಾದಾಗ ನಿರ್ವಹಿಸಿರಿ."

Source
متفق عليه
Download image

Saved at original quality