Hadith for the World
Tap the image to view it full size
ಅಕೀದಾ

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝಿನ ಸಮಯದಲ್ಲಿ ಬಿಲಾಲ್ ರಿಗೆ ಹೇಳಿದರು:

Available in 31 languages
«ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝಿನ ಸಮಯದಲ್ಲಿ ಬಿಲಾಲ್ ರಿಗೆ ಹೇಳಿದರು: "ಓ ಬಿಲಾಲ್, ಇಸ್ಲಾಮಿನಲ್ಲಿ ನೀನು ಮಾಡಿದ ಕಾರ್ಯಗಳಲ್ಲಿ, ನೀನು ಅತಿ ಹೆಚ್ಚು ನಿರೀಕ್ಷೆ (ಭರವಸೆ) ಇಟ್ಟಿರುವ ಕಾರ್ಯ ಯಾವುದು ಎಂದು ನನಗೆ ಹೇಳು. ಏಕೆಂದರೆ, ನಾನು ಸ್ವರ್ಗದಲ್ಲಿ ನನ್ನ ಮುಂದೆ ನಿನ್ನ ಚಪ್ಪಲಿಗಳ ಸದ್ದು (ಹೆಜ್ಜೆಗುರುತಿನ ಶಬ್ದ) ಕೇಳಿದೆನು." ಅವರು (ಬಿಲಾಲ್) ಹೇಳಿದರು: "ನಾನು ರಾತ್ರಿ ಅಥವಾ ಹಗಲಿನ ಯಾವುದೇ ಸಮಯದಲ್ಲಿ ಶುದ್ಧೀಕರಣ (ವುಧೂ) ಮಾಡಿದಾಗಲೆಲ್ಲಾ, ಆ ಶುದ್ಧೀಕರಣದೊಂದಿಗೆ ನನಗೆ ವಿಧಿಸಲಾದಷ್ಟು (ನನ್ನ ಹಣೆಬರಹದಲ್ಲಿ ಬರೆದಷ್ಟು) ನಮಾಝ್ ನಿರ್ವಹಿಸದೇ ಬಿಟ್ಟಿಲ್ಲ. ಇದನ್ನೇ ನಾನು (ನನ್ನ ಕಾರ್ಯಗಳಲ್ಲಿ) ಅತಿ ಹೆಚ್ಚು ನಿರೀಕ್ಷೆಯುಳ್ಳ ಕಾರ್ಯವೆಂದು ಭಾವಿಸುತ್ತೇನೆ."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು ಸ್ವರ್ಗದಲ್ಲಿರುವುದಾಗಿ ಕನಸಿನಲ್ಲಿ ಕಂಡರು. ಆಗ ಅವರು ಬಿಲಾಲ್ ಇಬ್ನ್ ರಬಾಹ್ ರಿಗೆ ಹೇಳಿದರು: "ಇಸ್ಲಾಮಿನಲ್ಲಿ ನೀನು ಮಾಡಿದ ಐಚ್ಛಿಕ ಕಾರ್ಯಗಳಲ್ಲಿ (ನಫಿಲ್) ಅತ್ಯಂತ ಹೆಚ್ಚು ಪ್ರತಿಫಲ ನಿರೀಕ್ಷಿಸುವ ಕಾರ್ಯ ಯಾವುದು ಎಂದು ನನಗೆ ತಿಳಿಸು? ಏಕೆಂದರೆ ಸ್ವರ್ಗದಲ್ಲಿ ನನ್ನ ಮುಂದೆ ನಡೆಯುವಾಗ ನಿನ್ನ ಚಪ್ಪಲಿಗಳ ಚಲನೆಯಿಂದ ಉಂಟಾಗುವ ಹಗುರವಾದ ಶಬ್ದವನ್ನು ನಾನು ಕೇಳಿದೆನು." ಬಿಲಾಲ್ ಹೇಳಿದರು: "ನನ್ನ ದೃಷ್ಟಿಯಲ್ಲಿ ಅತಿ ಹೆಚ್ಚು ನಿರೀಕ್ಷೆಯುಳ್ಳ ಕಾರ್ಯವೇನೆಂದರೆ, ನಾನು ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಯಾವಾಗಲಾದರೂ (ಮಲಮೂತ್ರ ವಿಸರ್ಜನೆ ಇತ್ಯಾದಿಗಳಿಂದ) ವುಧೂ ಮುರಿದರೆ, (ಮತ್ತೆ) ವುಧೂ ಮಾಡುತ್ತೇನೆ. ನಂತರ ಆ ವುಧೂವಿನ ಮೂಲಕ ನನ್ನ ರಬ್ಬ್ ಅಲ್ಲಾಹನಿಗಾಗಿ ನನಗೆ ಸಾಧ್ಯವಾದಷ್ಟು ಸಾಮಾನ್ಯ ನಫಿಲ್ (ಐಚ್ಛಿಕ) ನಮಾಝ್ ನಿರ್ವಹಿಸುತ್ತೇನೆ."

Source
متفق عليه
Download image

Saved at original quality