Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅಬೂ ಶುರೈಹ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 45 languages
«ಅಬೂ ಶುರೈಹ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ! ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ!". ಕೇಳಲಾಯಿತು: "ಓ ಅಲ್ಲಾಹುವಿನ ಸಂದೇಶವಾಹಕರೇ, ಯಾರು?" ಅವರು ಹೇಳಿದರು: "ಯಾರ ಕೆಡುಕುಗಳಿಂದ ಅವನ ನೆರೆಯವನು ಸುರಕ್ಷಿತವಾಗಿರುವುದಿಲ್ಲವೋ ಅವನು".»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಆಣೆ ಮಾಡಿದರು ಮತ್ತು (ವಿಷಯದ ಗಂಭೀರತೆಯನ್ನು ವ್ಯಕ್ತಪಡಿಸಲು) ಅದನ್ನು ಮೂರು ಬಾರಿ ಪುನರುಚ್ಛರಿಸಿದರು. ನಂತರ ಅವರು ಹೇಳಿದರು: ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ, ಅಲ್ಲಾಹುವಿನಾಣೆ, ಅವನು ಸತ್ಯವಿಶ್ವಾಸಿಯಾಗಿರುವುದಿಲ್ಲ. ಆಗ ಸಹಾಬಾಗಳು ಕೇಳಿದರು: ಓ ಅಲ್ಲಾಹುವಿನ ಸಂದೇಶವಾಹಕರೇ, ಸತ್ಯವಿಶ್ವಾಸಿಯಾಗದವರು ಯಾರು? ಅವರು ಹೇಳಿದರು: ಯಾರ ವಂಚನೆ, ಅನ್ಯಾಯ ಮತ್ತು ಕೆಡುಕನ್ನು ಅವನ ನೆರೆಯವನು ಭಯಪಡುತ್ತಾನೋ ಅವನು.

Source
رواه البخاري
Download image

Saved at original quality