Hadith for the World
ಸದ್ಗುಣಗಳು ಮತ್ತು ನಡವಳಿಕೆಗಳು

Jurisprudence of Supplications and Remembrance of Allah

62 hadiths

62 hadiths

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಾರ್ಥನೆಯನ್ನು ಪಠಿಸುತ್ತಿದ್ದರು: "ಓ ನನ್ನ ಪರಿಪಾಲಕನೇ! ನನ್ನ ಪಾಪಗಳನ್ನು, ಅವಿವೇಕತನವನ್ನು, ನನ್ನ ಎಲ್ಲಾ ಕೆಲಸ-ಕಾರ್ಯಗಳಲ್ಲಿರುವ ಅಪರಿಮಿತಿಯನ್ನು ಮತ್ತು ನನ್ನ ಬಗ್ಗೆ ನೀನು ನನಗಿಂತ ಹೆಚ್ಚು ತಿಳಿದಿರುವುದೆಲ್ಲವನ್ನೂ ಕ್ಷಮಿಸು. ಓ ಅಲ್ಲಾಹ್! ನನ್ನ ತಪ್ಪುಗಳನ್ನು, ಉದ್ದೇಶಪೂರ್ವಕವಾಗಿ ಮಾಡಿದ್ದನ್ನು, ಅವಿವೇಕತನದಿಂದ ಮಾಡಿದ್ದನ್ನು, ತಮಾಷೆಗಾಗಿ ಮಾಡಿದ್ದನ್ನು ಮತ್ತು ನನ್ನಲ್ಲಿರುವ ಎಲ್ಲಾ ಪಾಪಗಳನ್ನೂ ಕ್ಷಮಿಸು. ಓ ಅಲ್ಲಾಹ್! ನಾನು ಮುಂದಕ್ಕೆ ಕಳುಹಿಸಿರುವ, ಹಿಂದೆ ಬಿಟ್ಟಿರುವ, ಬಹಿರಂಗಪಡಿಸಿರುವ ಮತ್ತು ರಹಸ್ಯವಾಗಿ ಮಾಡಿರುವ ಪಾಪಗಳನ್ನು ಕ್ಷಮಿಸು. ನೀನೇ ಮುಂದಕ್ಕೆ ತರುವವನು ಮತ್ತು ಹಿಂದಕ್ಕೆ ತಳ್ಳುವವನು. ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನು."متفق عليه
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಳಗಾಗುವಾಗ ಮತ್ತು ಸಂಜೆಯಾಗುವಾಗ ಈ ಪ್ರಾರ್ಥನೆಗಳನ್ನು ಪಠಿಸದೆ ಬಿಟ್ಟುಬಿಡುತ್ತಿರಲಿಲ್ಲ: "ಓ ಅಲ್ಲಾಹ್! ಇಹಲೋಕದಲ್ಲೂ, ಪರಲೋಕದಲ್ಲೂ ನಾನು ನಿನ್ನಲ್ಲಿ ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಧರ್ಮದಲ್ಲಿ, ಇಹಲೋಕದಲ್ಲಿ, ಕುಟುಂಬದಲ್ಲಿ ಮತ್ತು ಸಂಪತ್ತಿನಲ್ಲಿ ಕ್ಷಮೆ ಮತ್ತು ಸೌಖ್ಯವನ್ನು ಬೇಡುತ್ತೇನೆ. ಓ ಅಲ್ಲಾಹ್! ನನ್ನ ಕುಂದು-ಕೊರತೆಗಳನ್ನು ಮುಚ್ಚಿಡು ಮತ್ತು ನನ್ನ ಭಯವನ್ನು ನಿವಾರಿಸು. ಓ ಅಲ್ಲಾಹ್! ನನ್ನ ಮುಂಭಾಗದಿಂದ, ನನ್ನ ಹಿಂಭಾಗದಿಂದ, ನನ್ನ ಬಲಭಾಗದಿಂದ, ನನ್ನ ಎಡಭಾಗದಿಂದ, ನನ್ನ ಮೇಲ್ಭಾಗದಿಂದ ನನ್ನನ್ನು ರಕ್ಷಿಸು. ನನ್ನ ಕೆಳಭಾಗದಿಂದ ನನ್ನನ್ನು ಹತ್ಯೆಗೈಯಲಾಗುವುದರಿಂದ ನಾನು ನಿನ್ನ ಮಹಾತ್ಮೆಯ ಮೂಲಕ ನಿನ್ನಲ್ಲಿ ರಕ್ಷೆ ಬೇಡುತ್ತೇನೆ."رواه أبو داود والنسائي وابن ماجه وأحمد
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಾರ್ಥಿಸುತ್ತಿದ್ದ ಪ್ರಾರ್ಥನೆಗಳಲ್ಲಿ ಒಂದು ಹೀಗಿತ್ತು: "ಓ ಅಲ್ಲಾಹ್! ನಿನ್ನ ಅನುಗ್ರಹಗಳ ನಿವಾರಣೆಯಿಂದ, ನಿನ್ನ ಸೌಖ್ಯದ ಬದಲಾವಣೆಯಿಂದ, ನಿನ್ನ ಹಠಾತ್ ಶಿಕ್ಷೆಯಿಂದ ಮತ್ತು ನಿನ್ನ ಸರ್ವ ಕ್ರೋಧಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ."رواه مسلم
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಾರ್ಥನೆಗಳನ್ನು ಪ್ರಾರ್ಥಿಸುತ್ತಿದ್ದರು: "ಓ ಅಲ್ಲಾಹ್! ನಾನು ನಿನ್ನಲ್ಲಿ ಸಾಲದ ಪ್ರಾಬಲ್ಯದಿಂದ, ಶತ್ರುಗಳ ಪ್ರಾಬಲ್ಯದಿಂದ ಮತ್ತು ಶತ್ರುಗಳು ಸಂಭ್ರಮಿಸುವುದರಿಂದ ರಕ್ಷೆ ಬೇಡುತ್ತೇನೆ."رواه النسائي وأحمد
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಚ್ಚಾಗಿ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆ ಹೀಗಿತ್ತು: "ಓ ಅಲ್ಲಾಹ್! ನಮಗೆ ಇಹಲೋಕದಲ್ಲಿ ಒಳಿತನ್ನು ದಯಪಾಲಿಸು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ಪಾರು ಮಾಡು."متفق عليه
ಶದ್ದಾದ್ ಬಿನ್ ಔಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕ್ಷಮೆಯಾಚನೆಯ ಸರದಾರನಂತಿರುವ ಪ್ರಾರ್ಥನೆ ಯಾವುದೆಂದರೆ ನೀವು ಹೀಗೆ ಪಠಿಸುವುದು: ಓ ಅಲ್ಲಾಹ್! ನೀನೇ ನನ್ನ ಪರಿಪಾಲಕ. ನಿನ್ನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ ಮತ್ತು ನಾನು ನಿನ್ನ ದಾಸನಾಗಿರುವೆ. ನಾನು ನನಗೆ ಸಾಧ್ಯವಾದಷ್ಟು ನಿನ್ನ ಕರಾರು ಮತ್ತು ವಾಗ್ದಾನಕ್ಕೆ ನಿಷ್ಠನಾಗಿರುತ್ತೇನೆ. ನಾನು ಮಾಡಿದ ಪಾಪಗಳ ಕೆಡುಕುಗಳಿಂದ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನನ್ನ ಮೇಲಿರುವ ನಿನ್ನ ಅನುಗ್ರಹಗಳನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಾನು ಮಾಡಿದ ಪಾಪಗಳನ್ನೂ ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ನನ್ನನ್ನು ಕ್ಷಮಿಸು. ಏಕೆಂದರೆ, ನಿಶ್ಚಯವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ." ಅವರು (ಪ್ರವಾದಿ) ಮುಂದುವರಿದು ಹೇಳಿದರು: "ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ಹಗಲಿನಲ್ಲಿ ಪಠಿಸಿ, ನಂತರ ಅದೇ ದಿನ ಸಂಜೆಯಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ. ಯಾರಾದರೂ ಇದರಲ್ಲಿ ಪೂರ್ಣ ನಂಬಿಕೆಯಿಟ್ಟು ಇದನ್ನು ರಾತ್ರಿಯಲ್ಲಿ ಪಠಿಸಿ, ನಂತರ ಬೆಳಗಾಗುವ ಮುನ್ನ ನಿಧನನಾದರೆ, ಅವನು ಸ್ವರ್ಗವಾಸಿಗಳಲ್ಲಿ ಸೇರುತ್ತಾನೆ."رواه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾಲಗೆಯಲ್ಲಿ ಹಗುರವಾದ, ತಕ್ಕಡಿಯಲ್ಲಿ ಭಾರವಾದ ಮತ್ತು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಇಷ್ಟವಾದ ಎರಡು ವಚನಗಳು: ಸುಬ್‌ಹಾನಲ್ಲಾಹಿಲ್ ಅಝೀಮ್ ಮತ್ತು ಸುಬ್‌ಹಾನಲ್ಲಾಹಿ ವಬಿಹಮ್ದಿಹೀ.”متفق عليه
ಝೈದ್ ಇಬ್ನ್ ಅರ್ಖಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಹೇಳುತ್ತಿದ್ದರೋ ಅದನ್ನು ಹೊರತುಪಡಿಸಿ ನಾನು ನಿಮಗೆ ಬೇರೇನೂ ಹೇಳುವುದಿಲ್ಲ. ಅವರು ಹೇಳುತ್ತಿದ್ದರು: "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್-ಅಜ್‌ಝಿ ವಲ್-ಕಸಲಿ ವಲ್-ಜುಬ್‌ನಿ ವಲ್-ಬುಖ್‌ಲಿ ವಲ್-ಹರಮಿ ವ ಅಝಾಬಿಲ್-ಖಬ್ರ್. (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿನ್ನಲ್ಲಿ ಅಶಕ್ತತೆ, ಸೋಮಾರಿತನ, ಹೇಡಿತನ, ಜಿಪುಣತನ, ಅತಿ ವೃದ್ಧಾಪ್ಯ ಮತ್ತು ಸಮಾಧಿಯ ಶಿಕ್ಷೆಯಿಂದ ಅಭಯ ಕೋರುತ್ತೇನೆ). ಅಲ್ಲಾಹುಮ್ಮ ಆತಿ ನಫ್ಸೀ ತಖ್ವಾಹಾ, ವ ಝಕ್ಕಿಹಾ ಅಂತ ಖೈರು ಮನ್ ಝಕ್ಕಾಹಾ, ಅಂತ ವಲಿಯ್ಯುಹಾ ವ ಮೌಲಾಹಾ. (ಅರ್ಥ: ಓ ಅಲ್ಲಾಹನೇ, ನನ್ನ ಆತ್ಮಕ್ಕೆ ಅದರ ತಖ್ವಾವನ್ನು (ದೇವಭಕ್ತಿಯನ್ನು) ನೀಡು, ಮತ್ತು ಅದನ್ನು ಪರಿಶುದ್ಧಗೊಳಿಸು, ನೀನೇ ಅದನ್ನು ಪರಿಶುದ್ಧಗೊಳಿಸುವವರಲ್ಲಿ ಅತ್ಯುತ್ತಮನು. ನೀನೇ ಅದರ 'ವಲೀ' (ರಕ್ಷಕ ಮಿತ್ರ) ಮತ್ತು 'ಮೌಲಾ' (ಒಡೆಯ)). "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಇಲ್ಮಿನ್ ಲಾ ಯನ್‌ಫಅ್, ವ ಮಿನ್ ಖಲ್‌ಬಿನ್ ಲಾ ಯಖ್‌ಶಅ್, ವ ಮಿನ್ ನಫ್‌ಸಿನ್ ಲಾ ತಶ್‌ಬಅ್, ವ ಮಿನ್ ದಅ್‌ವತಿನ್ ಲಾ ಯುಸ್ತಜಾಬು ಲಹಾ". (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ಪ್ರಯೋಜನ ನೀಡದ ಜ್ಞಾನದಿಂದ, ವಿನಯವಿಲ್ಲದ ಹೃದಯದಿಂದ, ಆಸೆ ತೀರದ ಆತ್ಮದಿಂದ, ಮತ್ತು ಸ್ವೀಕರಿಸಲ್ಪಡದ ಪ್ರಾರ್ಥನೆಯಿಂದ ನಿನ್ನಲ್ಲಿ ಅಭಯ ಕೋರುತ್ತೇನೆ).رواه مسلم
عن أنس رضي الله عنه أن رسول الله صلى الله عليه وسلم كان إذا أوى إلى فراشه، قال: «الحمد لله الذي أطعمنا وسقانا، وكفانا وآوانَا، فَكَمْ مِمَّنْ لا كَافِيَ له وَلاَ مُؤْوِيَ».رواه مسلم
عن أبي هريرة-رضي الله عنه مرفوعاً: «اللهم إني أعوذ بك من الجوع، فإنه بِئْسَ الضَّجِيعُ،وأعوذُ بِكَ منَ الخِيَانَةِ، فَإنَّهَا بِئْسَتِ البِطَانَةُ».رواه أبو داود والنسائي وابن ماجه
عن أنس بن مالك رضي الله عنه قال: كان رسول الله صلى الله عليه وسلم يقول: «اللهم إني أعوذ بك من العَجْزِ، والكَسَلِ، وَالجُبْنِ، والهَرَمِ، والبخل، وأعوذ بك من عذاب القبر، وأعوذ بك من فتنة المحيا والممات». وفي رواية: «وَضَلَعِ الدَّيْنِ، وَغَلَبَةِ الرِّجَالِ».متفق عليه. والرواية الثانية رواها البخاري دون مسلم
ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನೊಡನೆ ಹೇಳಿದರು: "ಓ ಅಲ್ಲಾಹ್! ನನಗೆ ಮಾರ್ಗದರ್ಶನ ನೀಡು ಮತ್ತು ನನ್ನನ್ನು ನೇರವಾಗಿಡು. ಮಾರ್ಗದರ್ಶನವನ್ನು ಬೇಡುವಾಗ ನೇರವಾದ ಮಾರ್ಗದಲ್ಲಿ ಮುನ್ನಡೆಸುವಂತೆ ಬೇಡು ಮತ್ತು ನೇರವಾಗಿರುವುದನ್ನು ಬೇಡುವಾಗ ಬಾಣದಷ್ಟು ನೇರವಾಗಿರುವುದನ್ನು ಬೇಡು."رواه مسلم
ಖೌಲ ಬಿಂತ್ ಹಕೀಂ ಸುಲಮಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಒಂದು ಸ್ಥಳದಲ್ಲಿ ಇಳಿದು, 'ಅಊದು ಬಿಕಲಿಮಾತಿಲ್ಲಾಹಿ ತ್ತಾಮ್ಮಾತಿ ಮಿನ್ ಶರ್‍ರಿ ಮಾ ಖಲಕ್' (ಅರ್ಥ: ಅಲ್ಲಾಹನ ಪರಿಪೂರ್ಣ ವಚನಗಳೊಂದಿಗೆ ಅವನು ಸೃಷ್ಟಿಸಿದ ಎಲ್ಲಾ ಕೆಡುಕುಗಳಿಂದ ನಾನು ರಕ್ಷೆ ಬೇಡುತ್ತೇನೆ) ಎಂದು ಹೇಳುತ್ತಾನೋ ಅವನು ಆ ಸ್ಥಳದಿಂದ ತೆರಳುವ ತನಕ ಅವನಿಗೆ ಯಾವುದೇ ವಸ್ತು ತೊಂದರೆ ಕೊಡುವುದಿಲ್ಲ."رواه مسلم
عن أبي هريرة رضي الله عنه مرفوعاً: «إذا أوى أحدكم إلى فراشه فَليَنْفُضْ فِرَاشَهُ بِدَاخِلَةِ إزَارِهِ فإنَّهُ لا يدري ما خلفه عليه، ثم يقول: باسمك ربي وضعت جنبي، وبك أرفعه، إن أمسكت نفسي فارحمها، وإن أرسلتها، فاحفظها بما تحفظ به عبادك الصالحين».متفق عليه
عن أبي هريرة رضي الله عنه مرفوعاً: «تعوذوا بالله من جَهْدِ البلاء، وَدَرَكِ الشقاء، وسوء القضاء، وشماتة الأعداء». وفي رواية قال سفيان: أشك أني زدت واحدة منها.متفق عليه
عن أنس بن مالك رضي الله عنه قال: كَانَ رَسُولُ اللهِ -صَلَّى اللهُ عَلَيْهِ وَسَلَّمَ- يَقُولُ: «اللهم إني أعوذ بك من البَرَصِ، والجُنُونِ، والجُذَامِ، وَسَيِّئِ الأسْقَامِ».رواه أبو داود والنسائي وأحمد
ಅಬ್ದುಲ್ಲಾ ಬಿನ್ ಖುಬೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾವು ಮಳೆ ಮತ್ತು ತೀವ್ರ ಕತ್ತಲೆಯ ರಾತ್ರಿ ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗಾಗಿ ನಮಾಝ್ ಮಾಡಲು ಹುಡುಕುತ್ತಾ ಹೊರಟೆವು. ನಾನು ಅವರನ್ನು ಕಂಡಾಗ, ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ನಂತರ ಅವರು ಹೇಳಿದರು: “ಹೇಳು.” ಆದರೆ ನಾನು ಏನೂ ಹೇಳಲಿಲ್ಲ. ಅವರು ಹೇಳಿದರು: “ಹೇಳು.” ನಾನು ಕೇಳಿದೆ: "ನಾನು ಏನು ಹೇಳಬೇಕು?" ಅವರು ಹೇಳಿದರು: ಸಂಜೆಯಾಗುವಾಗ ಮತ್ತು ಬೆಳಗಾಗುವಾಗ "ಕುಲ್ ಹುವಲ್ಲಾಹು ಅಹದ್" (ಸೂರ ಇಖ್ಲಾಸ್) ಮತ್ತು ರಕ್ಷೆ ಬೇಡುವ ಎರಡು ಸೂರಗಳನ್ನು (ಸೂರ ಫಲಕ್ ಮತ್ತು ಸೂರ ನಾಸ್) ಮೂರು ಬಾರಿ ಪಠಿಸು. ಅದು ನಿನಗೆ ಎಲ್ಲದ್ದಕ್ಕೂ ಸಾಕಾಗುತ್ತದೆ."رواه أبو داود والترمذي والنسائي
عن طلحة بن عبيد الله رضي الله عنه أن النبي صلى الله عليه وسلم كانَ إذا رأى الهلالَ، قال: «اللّهمَّ أهِلَّهُ عليْنا بالأمْن والإيمان، وَالسَّلامَةِ وَالإسلامِ، ربِّي وربُّكَ اللهُ، هِلالُ رُشْدٍ وخيرٍ».رواه الترمذي وأحمد والدارمي، وليس عندهم لفظة: "هلال رشد وخير"، وجاءت عند ابن ابي شيبة بسند مرسل
عن جابر رضي الله عنه قَالَ: كُنَّا إِذَا صَعِدْنَا كَبَّرْنَا، وَإِذَا نَزَلْنَا سَبَّحْنَا. عن ابن عمر رضي الله عنهما قالَ: كانَ النبيُّ صلى الله عليه وسلم وجيُوشُهُ إِذَا عَلَوا الثَّنَايَا كَبَّرُوا، وَإِذَا هَبَطُوا سَبَّحُوا.حديث جابر -رضي الله عنه- رواه البخاري. حديث ابن عمر -رضي الله عنهما- رواه أبو داود
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಬ್‌ಹಾನಲ್ಲಾಹಿ, ವಲ್‌ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಎಂದು ಹೇಳುವುದು ಸೂರ್ಯ ಬೆಳಗಿದ ಎಲ್ಲ ವಸ್ತುಗಳಿಗಿಂತಲೂ ನನಗೆ ಹೆಚ್ಚು ಇಷ್ಟವಾಗಿದೆ."رواه مسلم
ಕಅಬ್ ಬಿನ್ ಉಜ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು."رواه مسلم
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಅವೆರಡು ಸಾಕು."متفق عليه
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ಹೃದಯಗಳನ್ನು ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."رواه مسلم
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ." ಅವರು ಕೇಳಿದರು: "ಇಷ್ಟೇ ಏನು?" ನಾನು ಹೇಳಿದೆ: "ಹೌದು." ಅವರು ಹೇಳಿದರು: "ಇದನ್ನು ಪಠಿಸಿದರೆ ಶೈತಾನನು ಹೀಗೆ ಹೇಳುವನು: ಈ ಇಡೀ ದಿನ ಅವನು ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."رواه أبو داود