Hadith for the World
Topic

ಸದ್ಗುಣಗಳು ಮತ್ತು ನಡವಳಿಕೆಗಳು

288 hadiths

288 hadiths

ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಘೋಷಕನು ಘೋಷಿಸುವನು: ನೀವು ಸದಾ ಆರೋಗ್ಯವಂತರಾಗಿರುವಿರಿ. ನೀವೆಂದೂ ರೋಗಿಗಳಾಗುವುದಿಲ್ಲ. ನೀವು ಸದಾ ಜೀವಂತವಾಗಿರುವಿರಿ. ನೀವೆಂದೂ ಮರಣಹೊಂದುವುದಿಲ್ಲ. ನೀವು ಸದಾ ಯುವಕರಾಗಿರುವಿರಿ. ನೀವೆಂದೂ ವೃದ್ಧರಾಗುವುದಿಲ್ಲ. ನೀವು ಸದಾ ಸುಖಭೋಗಿಗಳಾಗುವಿರಿ. ನೀವೆಂದೂ ನೋವು ಅನುಭವಿಸುವುದಿಲ್ಲ. ಇದೇ ಅಲ್ಲಾಹನ ಈ ವಚನದ ಅರ್ಥ: "ಆಗ ಅವರೊಡನೆ ಹೇಳಲಾಗುವುದು: ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ." [ಅಅ್‌ರಾಫ್:43]رواه مسلم
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸರ್ವಶಕ್ತನಾದ ಅಲ್ಲಾಹು ಸ್ವರ್ಗವಾಸಿಗಳೊಡನೆ ಕೇಳುವನು: "ಓ ಸ್ವರ್ಗವಾಸಿಗಳೇ!" ಅವರು ಉತ್ತರಿಸುವರು: "ನಾವು ನಿನಗೆ ಓಗೊಡುತ್ತಿದ್ದೇವೆ ಮತ್ತು ನಿನ್ನ ಸೇವೆ ಮಾಡಲು ಸನ್ನದ್ಧರಾಗಿದ್ದೇವೆ." ಅವನು ಕೇಳುವನು: "ನಿಮಗೆ ತೃಪ್ತಿಯಾಗಿದೆಯೇ?" ಅವರು ಉತ್ತರಿಸುವರು: "ನಮಗೆ ತೃಪ್ತಿಯಾಗದಿರಲು ಹೇಗೆ ಸಾಧ್ಯ? ನೀನಂತೂ ನಿನ್ನ ಸೃಷ್ಟಿಗಳಲ್ಲಿ ಯಾರಿಗೂ ನೀಡದೇ ಇರುವುದನ್ನು ನಮಗೆ ನೀಡಿರುವೆ." ಅವನು ಹೇಳುವನು: "ನಾನು ಅದಕ್ಕಿಂತಲೂ ಶ್ರೇಷ್ಠವಾದುದನ್ನು ನಿಮಗೆ ನೀಡುವೆನು." ಅವರು ಕೇಳುವರು: "ಓ ನಮ್ಮ ಪರಿಪಾಲಕನೇ! ಇದಕ್ಕಿಂತಲೂ ಶ್ರೇಷ್ಠವಾದುದು ಇನ್ನೇನಿದೆ?" ಅವನು ಉತ್ತರಿಸುವನು: "ನಾನು ನನ್ನ ಸಂತೃಪ್ತಿಯನ್ನು ನಿಮ್ಮ ಮೇಲೆ ಸುರಿಸುವೆನು. ಇನ್ನು ನಾನು ನಿಮ್ಮೊಂದಿಗೆ ಎಂದಿಗೂ ಕೋಪಿಸಿಕೊಳ್ಳಲಾರೆನು."متفق عليه
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ, ಸ್ವರ್ಗದಲ್ಲಿ ಸತ್ಯವಿಶ್ವಾಸಿಗೆ ಒಂದೇ ಮುತ್ತಿನಿಂದ ಮಾಡಿದ, ಒಳಗೆ ಟೊಳ್ಳಾದ ಒಂದು ಗುಡಾರವಿದೆ. ಅದರ ಉದ್ದ ಅರವತ್ತು ಮೈಲಿಗಳು. ಸತ್ಯವಿಶ್ವಾಸಿಗೆ ಅದರಲ್ಲಿ ಪತ್ನಿಯರು ಇರುತ್ತಾರೆ. ಸತ್ಯವಿಶ್ವಾಸಿ ಅವರನ್ನು ಸರದಿಯಂತೆ ಭೇಟಿ ಮಾಡುತ್ತಾನೆ. ಆದರೆ ಅವರು ಒಬ್ಬರನ್ನೊಬ್ಬರು ನೋಡುವುದಿಲ್ಲ."متفق عليه
عن أبي هريرة رضي الله عنه قال: قال رسول الله صلى الله عليه وسلم : «من قتل وَزَغَةً فِي أَوَّلِ ضَرْبَةٍ فله كذا وكذا حسنة، ومن قتلها في الضَّرْبَةِ الثانية فله كذا وكذا حسنة دون الأولى، وإن قتلها في الضربة الثالثة فله كذا وكذا حسنة». وفي رواية: «من قتل وَزَغًا في أول ضربة كتب له مائة حسنة، وفي الثانية دون ذلك، وفي الثالثة دون ذلك».رواه مسلم
عن أبي سعيد الخُدْرِي رضي الله عنه قال: جاءت امرأة إلى رسول الله صلى الله عليه وسلم فقالت: يا رسول الله، ذهب الرجال بِحَدِيثِكَ، فاجْعَل لنَا من نَفْسِك يومًا نَأتِيكَ فيه تُعَلِّمُنَا مما عَلَّمَكَ الله، قال: «اجْتَمِعْنَ يَوَم كَذَا وكَذَا» فَاجْتَمَعْنَ، فأتَاهُنَّ النبي صلى الله عليه وسلم فَعَلَّمَهُنَّ مما عَلَّمَهُ الله، ثم قال: «ما مِنْكُنَّ من امرأة تُقَدِّمُ ثَلاَثَة من الولد إلا كانوا حِجَابًا من النَّارِ» فقالت امرأة: واثنين؟ فقال رسول الله صلى الله عليه وسلم : «واثنين».متفق عليه
عن أبي هريرة رضي الله عنه أن رسول الله صلى الله عليه وسلم قال: «إذا قال الرَّجُل: هَلَكَ الناس، فهو أَهْلَكُهُم».رواه مسلم
ಹಿಶಾಮ್ ಇಬ್ನ್ ಹಕೀಮ್ ಇಬ್ನ್ ಹಿಝಾಮ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಶಾಮ್ (ಸಿರಿಯಾ) ನಲ್ಲಿ 'ಅನ್ಬಾತ್' (ಜನಾಂಗದವರು) ಗಳ ಒಂದು ಗುಂಪಿನ ಬಳಿ ಹಾದುಹೋದರು. ಅವರನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಅವರು (ಹಿಶಾಮ್) ಕೇಳಿದರು: "ಇವರ ವಿಷಯವೇನು?". ಜನರು ಹೇಳಿದರು: "ಅವರನ್ನು 'ಜಿಝ್ಯಾ' (ತೆರಿಗೆ) ಗಾಗಿ ತಡೆಹಿಡಿಯಲಾಗಿದೆ". ಆಗ ಹಿಶಾಮ್ ಹೇಳಿದರು: "ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಖಂಡಿತವಾಗಿಯೂ ಕೇಳಿದ್ದೇನೆ ಎಂದು ನಾನು ಸಾಕ್ಷಿ ನುಡಿಯುತ್ತೇನೆ: 'ಖಂಡಿತವಾಗಿಯೂ ಇಹಲೋಕದಲ್ಲಿ ಜನರನ್ನು ಶಿಕ್ಷಿಸುವವರನ್ನು ಅಲ್ಲಾಹು ಶಿಕ್ಷಿಸುತ್ತಾನೆ' ".رواه مسلم
عن أبي ذر رضي الله عنه قال: قيل لرسول الله صلى الله عليه وسلم : أرأيت الرَّجل الذي يعمل العمل من الخَير، ويَحمدُه الناس عليه؟ قال: «تلك عاجِل بُشْرَى المؤمن».رواه مسلم
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಪುರುಷನು ಇನ್ನೊಬ್ಬ ಪುರುಷನ ಖಾಸಗಿ ಭಾಗಗಳನ್ನು ಮತ್ತು ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಖಾಸಗಿ ಭಾಗಗಳನ್ನು ನೋಡಬಾರದು. ಒಬ್ಬ ಪುರುಷನು ಇನ್ನೊಬ್ಬ ಪುರುಷನ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯ ಜೊತೆಗೆ ಒಂದೇ ಬಟ್ಟೆಯಲ್ಲಿ ಮಲಗಬಾರದು."رواه مسلم
عن ابن عمر رضي الله عنهما مرفوعاً: «لا تَتْرُكُوا النار في بيوتكم حين تنامون».متفق عليه
عن عائشة رضي الله عنها ، قالت: كان النبي صلى الله عليه وسلم إذا عَصَفَت الرِّيح قال: «اللَّهُمَّ إنِّي أسْأَلُك خَيرها وخير ما فيها وخَير ما أُرسِلت به، وأعوذ بك من شرِّها وشرِّ ما فيها وشرِّ ما أُرسِلت به».رواه مسلم
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈದುಲ್ ಅದ್‌ಹಾ ಅಥವಾ ಈದುಲ್ ಫಿತ್ರ್ ಹಬ್ಬದ ದಿನದಂದು ಈದ್‌ಗಾಹ್‌ಗೆ ಹೊರಟರು. ನಂತರ ಮಹಿಳೆಯರ ಬಳಿಗೆ ಹೋಗಿ ಹೇಳಿದರು: "ಓ ಮಹಿಳೆಯರ ಸಮೂಹವೇ! ದಾನ ಮಾಡಿರಿ. ಏಕೆಂದರೆ ನಾನು ನರಕವಾಸಿಗಳಲ್ಲಿ ನಿಮ್ಮನ್ನು ಹೆಚ್ಚಾಗಿ ನೋಡಿದ್ದೇನೆ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅದಕ್ಕೆ ಕಾರಣವೇನು?” ಅವರು ಉತ್ತರಿಸಿದರು: "ನೀವು ಹೆಚ್ಚುಹೆಚ್ಚಾಗಿ ಶಪಿಸುತ್ತೀರಿ ಮತ್ತು ನಿಮ್ಮ ಗಂಡನಿಗೆ ಕೃತಘ್ನರಾಗುತ್ತೀರಿ. ಬುದ್ಧಿ ಮತ್ತು ಧರ್ಮದಲ್ಲಿ ನಿಮಗಿಂತಲೂ ಹೆಚ್ಚು ಕೊರತೆಯಿರುವವರನ್ನು ನಾನು ನೋಡಿಲ್ಲ. ಆದರೂ ನೀವು ದೃಢಮನಸ್ಸಿನ ಪುರುಷನ ಬುದ್ಧಿಯನ್ನು ಕದಡಬಲ್ಲಿರಿ." ಆಗ ಅವರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನಮ್ಮ ಧರ್ಮ ಮತ್ತು ಬುದ್ಧಿಗಳಲ್ಲಿನ ಕೊರತೆಯೇನು?” ಅವರು ಉತ್ತರಿಸಿದರು: "ಮಹಿಳೆಯ ಸಾಕ್ಷ್ಯವು ಪುರುಷನ ಸಾಕ್ಷ್ಯದ ಅರ್ಧದಷ್ಟಲ್ಲವೇ?" ಅವರು ಹೇಳಿದರು: “ಹೌದು.” ಪ್ರವಾದಿಯವರು ಹೇಳಿದರು: "ಅದು ಅವಳ ಬುದ್ಧಿಯ ಕೊರತೆಯಿಂದಾಗಿದೆ. ಅವಳು ಮುಟ್ಟಾದಾಗ ನಮಾಝ್ ಮತ್ತು ಉಪವಾಸವನ್ನು ಬಿಟ್ಟುಬಿಡುವುದಿಲ್ಲವೇ?" ಅವರು ಹೇಳಿದರು: “ಹೌದು.” ಪ್ರವಾದಿಯವರು ಹೇಳಿದರು: "ಅದು ಅವಳ ಧರ್ಮದ ಕೊರತೆಯಿಂದಾಗಿದೆ."متفق عليه
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಮುಆದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದಾಗ ಅವರು ಕರೆದರು: "ಓ ಮುಆದ್ ಬಿನ್ ಜಬಲ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಅವರು ಕರೆದರು: "ಓ ಮುಆದ್!" ಮುಆದ್ ಉತ್ತರಿಸಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಸೇವೆ ಮಾಡಲು ನಾನಿಲ್ಲಿದ್ದೇನೆ." ಹೀಗೆ ಅವರು ಮೂರು ಬಾರಿ ಕರೆದರು. ನಂತರ ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಯಾರು ತನ್ನ ಹೃದಯದಿಂದ ಪ್ರಾಮಾಣಿಕವಾಗಿ ಸಾಕ್ಷಿ ವಹಿಸುತ್ತಾನೋ ಅವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸದೇ ಇರಲಾರ." ಮುಆದ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಜನರಿಗೆ ಸಂತೋಷವಾಗುವ ಈ ಸುದ್ದಿಯನ್ನು ನಾನು ಅವರಿಗೆ ತಿಳಿಸಲೇ?" ಅವರು ಹೇಳಿದರು: "ಬೇಡ, ಅವರು ಅದರ ಮೇಲೆ ಅವಲಂಬಿತರಾಗುವರು." (ಜ್ಞಾನವನ್ನು ಬಚ್ಚಿಟ್ಟ) ಪಾಪಕ್ಕೆ ಗುರಿಯಾಗದಿರಲು ಮುಆದ್ ಮರಣದ ಸಮಯದಲ್ಲಿ ಇದನ್ನು ಜನರಿಗೆ ತಿಳಿಸಿದರು.متفق عليه
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರ ನಾಲಗೆ ಮತ್ತು ಕೈಯಿಂದ ಇತರ ಮುಸಲ್ಮಾನರು ಸುರಕ್ಷಿತರೋ ಅವನೇ ಮುಸ್ಲಿಮ್. ಯಾರು ಅಲ್ಲಾಹು ನಿಷೇಧಿಸಿದ್ದನ್ನು ತೊರೆಯುತ್ತಾನೋ ಅವನೇ ಮುಹಾಜಿರ್."متفق عليه
عن أنس رضي الله عنه : أن النبيَّ صلى الله عليه وسلم جاءَ إلى سعد بنِ عبادة رضي الله عنه فَجَاءَ بِخُبْزٍ وَزَيْتٍ، فأكلَ، ثم قال النبيُّ صلى الله عليه وسلم : «أفْطَرَ عِنْدَكُمُ الصَّائِمُونَ؛ وَأكَلَ طَعَامَكُمُ الأَبرَارُ، وَصَلَّتْ عَلَيْكُمُ المَلاَئِكَةُ».رواه أبو داود وابن ماجه وأحمد والدارمي
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನ್‌ನಲ್ಲಿ ಪರಿಣಿತನಾದವನು ಗೌರವಾನ್ವಿತ, ವಿಧೇಯ ಬರಹಗಾರರೊಂದಿಗೆ (ದೇವದೂತರು) ಇರುವನು. ಯಾರು ಕುರ್‌ಆನ್ ಓದುವಾಗ ಅದರಲ್ಲಿ ತಡವರಿಸುತ್ತಾನೋ, ಮತ್ತು ಅದು ಅವನಿಗೆ ಕಷ್ಟಕರವಾಗಿದೆಯೋ, ಅವನಿಗೆ ಎರಡು ಪ್ರತಿಫಲಗಳಿವೆ".متفق عليه
عن عبد الله بن عمرو بن العاص رضي الله عنهما ، قال: سمعت رسول الله صلى الله عليه وسلم يقول: «إنَّ اللهَ لاَ يَقْبِضُ العِلْمَ انْتِزَاعاً يَنْتَزعهُ مِنَ النَّاسِ، وَلكِنْ يَقْبِضُ العِلْمَ بِقَبْضِ العُلَمَاءِ، حَتَّى إِذَا لَمْ يُبْقِ عَالِماً، اتَّخَذَ النَّاسُ رُؤُوساً جُهَّالاً، فَسُئِلُوا فَأفْتوا بِغَيْرِ عِلْمٍ، فَضَلُّوا وَأضَلُّوا».متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅತ್ಯಂತ ಪರಿಶುದ್ಧ ಮತ್ತು ಸರ್ವೋನ್ನತನಾದ ಅಲ್ಲಾಹು ಹೇಳುತ್ತಾನೆ: 'ನಾನು ನನ್ನ ಸಜ್ಜನ ದಾಸರಿಗಾಗಿ (ಸ್ವರ್ಗದಲ್ಲಿ) ಏನೇನು ಸಿದ್ಧಪಡಿಸಿದ್ದೇನೆಂದರೆ, (ಅಂತಹ ಸುಖಸಾಧನಗಳನ್ನು) ಯಾವ ಕಣ್ಣೂ ಕಂಡಿಲ್ಲ, ಯಾವ ಕಿವಿಯೂ ಕೇಳಿಲ್ಲ, ಮತ್ತು ಯಾವ ಮಾನವನ ಹೃದಯಕ್ಕೂ ಅದರ ಕಲ್ಪನೆ ಬಂದಿಲ್ಲ' ". ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: ನೀವು ಇಚ್ಛಿಸುವುದಾದರೆ ಪಠಿಸಿರಿ: "ಯಾವುದೇ ಆತ್ಮಕ್ಕೂ ತಿಳಿದಿಲ್ಲ, ಕಣ್ಣುಗಳಿಗೆ ತಂಪು ನೀಡುವಂತಹ ಏನೆಲ್ಲಾ ಅವರಿಗಾಗಿ ಗುಪ್ತವಾಗಿಡಲಾಗಿದೆ ಎಂದು." [ಸೂರ ಸಜ್ದಾ: 32:17].متفق عليه
عن عياض بن حمار المجاشعي رضي الله عنه ، أن رسول الله صلى الله عليه وسلم ، قال ذات يوم في خطبته: «ألَا إن ربي أمرني أن أُعَلِّمَكم ما جَهِلتم، ممَّا علَّمني يومي هذا، كلُّ مالٍ نَحَلتُه عبدًا حلال، وإني خلقتُ عبادي حُنَفاء كلهم، وإنهم أتتهم الشياطين فاجتالتهم عن دينهم، وحَرَّمت عليهم ما أحللتُ لهم، وأمرتهم أن يُشركوا بي ما لم أُنزِّل به سلطانا، وإن الله نظر إلى أهل الأرض، فمَقَتهم عربهم وعَجَمهم، إلَّا بقايا من أهل الكتاب، وقال: إنما بعثتُك لأبتليَك وأبتلي بك، وأنزلتُ عليك كتابًا لا يغسله الماءُ، تقرؤه نائمًا ويقظان، وإنَّ اللهَ أمرني أن أحرِق قُرَيشًا، فقلت: رب إذا يَثْلُغوا رأسي فيدعوه خُبْزة، قال: استخرجهم كما استخرجوك، واغزهم نُغزك، وأنفق فسننفق عليك، وابعث جيشا نبعث خمسة مثله، وقاتل بمن أطاعك مَن عصاك، قال: وأهل الجنة ثلاثة ذو سلطان مُقْسِط مُتَصَدِّق مُوَفَّق، ورجل رحيم رقيق القلب لكل ذي قربى ومسلم، وعفيف متعفِّف ذو عيال، قال: وأهل النار خمسة: الضعيف الذي لا زَبْر له، الذين هم فيكم تبعا لا يبتغون أهلا ولا مالا، والخائن الذي لا يخفى له طمع، وإن دقَّ إلا خانه، ورجل لا يُصبح ولا يمسي إلا وهو يخادعك عن أهلك ومالك «وذكر» البخل أو الكذب والشِّنظير الفحَّاش».رواه مسلم
عن ابن عباس رضي الله عنهما ، قال: كان النبيُّ صلى الله عليه وسلم يدعو: «ربِّ أَعِنِّي ولا تُعِن عليَّ، وانصرني ولا تنصر عليَّ، وامكر لي ولا تمكر عليَّ، واهدني ويسِّر هُدايَ إليَّ، وانصرني على مَن بغى عليَّ، اللهم اجعلني لك شاكرًا، لك ذاكرًا، لك راهبًا، لك مِطواعًا، إليك مُخْبِتًا، أو مُنِيبا، رب تقبَّل توبتي، واغسل حَوْبتي، وأجب دعوتي، وثبِّت حُجَّتي، واهدِ قلبي، وسدِّد لساني، واسْلُلْ سَخِيمةَ قلبي».رواه أبو داود والترمذي وابن ماجه وأحمد
عن زيد بن أرقم رضي الله عنه ، عن رسول الله صلى الله عليه وسلم قال:«إنَّ هذه الحُشُوشَ مُحْتَضَرَةٌ، فإذا أتى أحدُكم الخَلَاءَ فَلْيَقُلْ: أعوذُ باللهِ مِنَ الخُبُثِ والخَبَائث».رواه أبو داود وابن ماجه وأحمد
عن زيد مولى رسول الله صلى الله عليه وسلم قال: قال رسول الله صلى الله عليه وسلم : «من قال: أَسْتَغْفِرُ الله الذي لا إله إلا هو الحَيَّ القيَّومَ وأتوب إليه، غُفرت ذنوبه، وإن كان قد فَرَّ من الزَّحْف».رواه أبو داود والترمذي
ಅಬೂ ಉಮಾಮಾ ಅಲ್-ಬಾಹಿಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಕುರ್‌ಆನ್ ಅನ್ನು ಪಠಿಸಿರಿ. ಏಕೆಂದರೆ, ಖಂಡಿತವಾಗಿಯೂ ಅದು ಪುನರುತ್ಥಾನ ದಿನದಂದು ತನ್ನ ಸಂಗಾತಿಗಳಿಗೆ (ಅದನ್ನು ಪಠಿಸುವವರಿಗೆ ಮತ್ತು ಪಾಲಿಸುವವರಿಗೆ) ಶಿಫಾರಸ್ಸುದಾರನಾಗಿ ಬರುತ್ತದೆ. 'ಅಝ್ಝಹ್ರಾವೈನ್' ಗಳಾದ ಸೂರಃ ಅಲ್-ಬಖರ ಮತ್ತು ಸೂರಃ ಆಲ್-ಇಮ್ರಾನ್ ಅನ್ನು ಪಠಿಸಿರಿ. ಏಕೆಂದರೆ, ಖಂಡಿತವಾಗಿಯೂ ಅವೆರಡೂ ಪುನರುತ್ಥಾನ ದಿನದಂದು ಎರಡು ಮೋಡಗಳಂತೆ, ಅಥವಾ ಎರಡು ನೆರಳು ನೀಡುವ ವಸ್ತುಗಳಂತೆ, ಅಥವಾ ಸಾಲಾಗಿ ಹಾರಾಡುವ ಎರಡು ಪಕ್ಷಿಗಳ ಗುಂಪುಗಳಂತೆ ಬಂದು, ತಮ್ಮ ಸಂಗಾತಿಗಳ ಪರವಾಗಿ ವಾದಿಸುತ್ತವೆ. ಸೂರಃ ಅಲ್-ಬಖರವನ್ನು ಪಠಿಸಿರಿ. ಖಂಡಿತವಾಗಿಯೂ ಅದನ್ನು (ಪಠಿಸುವುದು/ಪಾಲಿಸುವುದು) 'ಬರಕತ್' (ಸಮೃದ್ಧಿ) ಆಗಿದೆ, ಮತ್ತು ಅದನ್ನು ಬಿಡುವುದು 'ಹಸ್ರತ್' (ವಿಷಾದ) ಆಗಿದೆ, ಮತ್ತು ಮಾಟಗಾರರು ಅದನ್ನು ಎದುರಿಸಲು ಸಾಧ್ಯವಿಲ್ಲ".رواه مسلم
عن واثلة بن الأسقع رضي الله عنه ، قال: قال رسول الله صلى الله عليه وسلم : «إنَّ اللهَ اصْطَفى كِنانَة من وَلَد إسماعيل، واصْطَفى قُريشًا من كِنانة، واصْطَفى بَني هاشم مِنْ قُرَيش، واصْطَفاني مِنْ بني هاشم، فأنا سَيِّدُ وَلَد آدم ولا فَخْر، وأوَّلُ مَن تَنْشَقُّ عنه الأرض، وأوَّلُ شافع، وأوَّل مُشَفَّع».رواه ابن حبان، وأصله في صحيح مسلم