Hadith for the World
ಅಂತ್ಯದಿನದಲ್ಲಿ ವಿಶ್ವಾಸವಿಡುವುದು

Portents of the Hour

4 hadiths

4 hadiths

عن مرداس الأسلمي رضي الله عنه قَالَ: قَالَ النَّبِيُّ -صَلَّى اللهُ عَلَيْهِ وَسَلَّمَ-: «يذهب الصالحون الأول فالأول، ويبقى حُثَالَةٌ كَحُثَالَةِ الشعير أو التمر لا يُبَالِيهُم الله بَالَةً».رواه البخاري
ಝೈನಬ್ ಬಿಂತ್ ಜಹ್ಶ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಾಬರಿಯಿಂದ ಅವರ ಬಳಿಗೆ ಬಂದು ಹೇಳತೊಡಗಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ. ಸನ್ನಿಹಿತವಾದ ಕೆಡುಕಿನಿಂದಾಗಿ ಅರಬ್ಬರಿಗೆ ವಿನಾಶ ಕಾದಿದೆ. ಇಂದು ಯಅಜೂಜ್ ಮತ್ತು ಮಅಜೂಜರ ಗೋಡೆಯಲ್ಲಿ ಇಂತಹ ಒಂದು ದ್ವಾರ ತೆರೆಯಲ್ಪಟ್ಟಿದೆ." ಅವರು ತಮ್ಮ ತೋರುಬೆರಳು ಮತ್ತು ಹೆಬ್ಬೆರಳನ್ನು ವೃತ್ತಾಕಾರದಲ್ಲಿ ಹಿಡಿದು ತೋರಿಸಿದರು. ಝೈನಬ್ ಬಿಂತ್ ಜಹ್ಶ್ ಹೇಳಿದರು: "ನಾನು ಕೇಳಿದೆ: ಓ ಅಲ್ಲಾಹನ ಸಂದೇಶವಾಹಕರೇ! ನಮ್ಮಲ್ಲಿ ನೀತಿವಂತರು ಇರುವಾಗ ನಾವು ನಾಶವಾಗುವೆವೇ?" ಅವರು ಉತ್ತರಿಸಿದರು: "ಹೌದು, ಕೆಡುಕು ಹೆಚ್ಚಾದಾಗ."متفق عليه
ಅಬೂ ದರ್ದಾಅ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಸೂರ ಕಹ್ಫ್‌ನ ಮೊದಲ ಹತ್ತು ವಚನಗಳನ್ನು ಕಂಠಪಾಠ ಮಾಡುತ್ತಾರೋ ಅವರು ದಜ್ಜಾಲ್‌ನಿಂದ ರಕ್ಷಿಸಲ್ಪಡುತ್ತಾರೆ." ಮತ್ತೊಂದು ವರದಿಯಲ್ಲಿ: "ಸೂರ ಕಹ್ಫ್‌ನ ಕೊನೆಯ (ಹತ್ತು ವಚನಗಳನ್ನು)."رواه مسلم
عن أبي هريرة رضي الله عنه قال: قال رسول الله صلى الله عليه وسلم : «على أَنْقَابِ المدينةِ ملائكةٌ لا يدخلُها الطَّاعونُ، ولا الدَّجَّالُ».متفق عليه