Hadith for the World
ಅಂತ್ಯದಿನದಲ್ಲಿ ವಿಶ್ವಾಸವಿಡುವುದು

The Barzakh Life (After death Period)

2 hadiths

2 hadiths

ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ಮರಣ ಹೊಂದಿದರೆ, (ಪರಲೋಕದಲ್ಲಿರುವ) ಅವನ ಸ್ಥಾನವನ್ನು ಅವನಿಗೆ ಬೆಳಿಗ್ಗೆ ಮತ್ತು ಸಂಜೆ ತೋರಿಸಲಾಗುತ್ತದೆ. ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗಿದ್ದರೆ ಸ್ವರ್ಗದ (ಸ್ಥಾನವನ್ನು) ಮತ್ತು ನರಕವಾಸಿಗಳಲ್ಲಿ ಸೇರಿದವನಾಗಿದ್ದರೆ ನರಕದ ಸ್ಥಾನವನ್ನು ತೋರಿಸಲಾಗುತ್ತದೆ. ನಂತರ ಅವನಿಗೆ ಹೇಳಲಾಗುತ್ತದೆ: 'ಅಲ್ಲಾಹು ನಿನ್ನನ್ನು ಪುನರುತ್ಥಾನ ದಿನದಂದು ಎಬ್ಬಿಸುವವರೆಗೆ ಇದೇ ನಿನ್ನ ಸ್ಥಾನವಾಗಿದೆ' ".متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಪಶ್ಚಿಮದಿಂದ ಉದಯವಾಗುವ ತನಕ ಪ್ರಳಯ ಸಂಭವಿಸುವುದಿಲ್ಲ. ಅದು ಉದಯವಾದಾಗ ಜನರೆಲ್ಲರೂ ಅದನ್ನು ನೋಡಿ ವಿಶ್ವಾಸವಿಡುತ್ತಾರೆ. ಅದು ಯಾವಾಗ ಎಂದರೆ: "ಮೊದಲೇ ವಿಶ್ವಾಸವಿಟ್ಟವರ ಅಥವಾ ತಮ್ಮ ವಿಶ್ವಾಸದ ಮೂಲಕ ಏನಾದರೂ ಒಳಿತನ್ನು ಮಾಡಿದವರ ಹೊರತು ಯಾವುದೇ ವ್ಯಕ್ತಿಗೂ ಅವನ ವಿಶ್ವಾಸವು ಪ್ರಯೋಜನ ನೀಡುವುದಿಲ್ಲ." [ಅನ್‌ಆಮ್ 158] (ಎಂದು ಅಲ್ಲಾಹು ಹೇಳಿದ ಸಮಯದಲ್ಲಾಗಿದೆ). ನಿಶ್ಚಯವಾಗಿಯೂ ಇಬ್ಬರು ವ್ಯಕ್ತಿಗಳು ಬಟ್ಟೆಯನ್ನು ಹರಡಿ ಅದನ್ನು ಖರೀದಿಸುವುದಕ್ಕೆ ಅಥವಾ ಅದನ್ನು ಮಡಚಿಡುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಒಂಟೆಯ ಹಾಲನ್ನು ಕರೆದು ಅದನ್ನು ಕುಡಿಯುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ತನ್ನ ನೀರಿನ ಕೊಳವನ್ನು ಸರಿಪಡಿಸಿ (ಜಾನುವಾರುಗಳಿಗೆ) ನೀರುಣಿಸುವ ಮೊದಲೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಆಹಾರದ ತುತ್ತನ್ನು ಎತ್ತಿ ಬಾಯಿಗಿಡುವ ಮೊದಲೇ ಪ್ರಳಯವು ಸಂಭವಿಸುತ್ತದೆ."متفق عليه