Hadith for the World

All hadiths

The complete card collection, filter by chapter

655 hadiths

عن زيد بن خالد الجهني رضي الله عنه عن النبي صلى الله عليه وسلم أنه قال: «مَنْ فَطَّرَ صائمًا، كان له مِثْلُ أجْرِهِ، غَيْرَ أنَّهُ لاَ يُنْقَصُ مِنْ أجْرِ الصَّائِمِ شَيْءٌ».رواه الترمذي وابن ماجه والنسائي في الكبرى والدارمي وأحمد
ಸಅದ್ ಬಿನ್ ಅಬೂ ವಕ್ಕಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ."رواه مسلم
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಅವೆರಡು ಸಾಕು."متفق عليه
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ."رواه الترمذي
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಆದಮರ ಮಕ್ಕಳ (ಮನುಷ್ಯರ) ಎಲ್ಲಾ ಹೃದಯಗಳು ರಹ್ಮಾನ್‌ನ (ಪರಮ ದಯಾಮಯನಾದ ಅಲ್ಲಾಹನ) ಬೆರಳುಗಳ ಪೈಕಿ ಎರಡು ಬೆರಳುಗಳ ನಡುವೆ ಒಂದೇ ಹೃದಯದಂತೆ ಇವೆ. ಅವನು ತಾನು ಇಚ್ಛಿಸಿದಂತೆ ಅದನ್ನು ತಿರುಗಿಸುತ್ತಾನೆ." ನಂತರ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ಹೃದಯಗಳನ್ನು ತಿರುಗಿಸುವವನೇ, ನಮ್ಮ ಹೃದಯಗಳನ್ನು ನಿನ್ನ ವಿಧೇಯತೆಯ ಕಡೆಗೆ ತಿರುಗಿಸು."رواه مسلم
عن أبي هريرة رضي الله عنه عن النبي صلى الله عليه وسلم قال: «ما توطَّنَ رجلٌ مسلمٌ المساجدَ للصلاة والذِّكر، إلا تَبَشْبَشَ اللهُ له، كما يَتَبَشْبَشُ أهلُ الغائب بغائبهم إذا قَدِمَ عليهم».رواه ابن ماجه وأحمد
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ಅಲ್ಲಾಹು ಹೇಳಿದನು: ನನ್ನ ಮಿತ್ರರ ಮೇಲೆ ದ್ವೇಷ ತೋರುವವನು ಯಾರೋ ಅವನ ವಿರುದ್ಧ ನಾನು ಯುದ್ಧವನ್ನು ಘೋಷಿಸಿದ್ದೇನೆ. ನಾನು ನನ್ನ ದಾಸನಿಗೆ ಕಡ್ಡಾಯಗೊಳಿಸಿದ ಕರ್ಮಗಳ ಮೂಲಕವಲ್ಲದೆ ನಾನು ಇಷ್ಟಪಡುವ ಇತರ ಯಾವುದರ ಮೂಲಕವೂ ಅವನು ನನಗೆ ಹತ್ತಿರವಾಗುವುದಿಲ್ಲ. ನನ್ನ ದಾಸನು ಹೆಚ್ಚುವರಿ ಕರ್ಮಗಳನ್ನು (ಐಚ್ಛಿಕ ಕರ್ಮಗಳನ್ನು) ಮಾಡುವ ಮೂಲಕ ನನಗೆ ಹತ್ತಿರವಾಗುತ್ತಲೇ ಇರುತ್ತಾನೆ, ಎಲ್ಲಿಯವರೆಗೆಂದರೆ ನಾನು ಅವನನ್ನು ಪ್ರೀತಿಸುವ ತನಕ. ನಾನು ಅವನನ್ನು ಪ್ರೀತಿಸಿದರೆ, ಅವನು ಕೇಳುವ ಅವನ ಶ್ರವಣ ನಾನಾಗುತ್ತೇನೆ, ಅವನು ನೋಡುವ ಅವನ ದೃಷ್ಟಿ ನಾನಾಗುತ್ತೇನೆ, ಅವನು ಹಿಡಿಯುವ ಅವನ ಕೈ ನಾನಾಗುತ್ತೇನೆ ಮತ್ತು ಅವನು ನಡೆಯುವ ಅವನ ಕಾಲು ನಾನಾಗುತ್ತೇನೆ. ಅವನು ನನ್ನಲ್ಲಿ ಏನಾದರೂ ಕೇಳಿದರೆ ನಾನು ಅದನ್ನು ಖಂಡಿತ ಕೊಡುತ್ತೇನೆ. ಅವನು ನನ್ನಲ್ಲಿ ರಕ್ಷೆ ಬೇಡಿದರೆ ನಾನು ಖಂಡಿತ ಅವನಿಗೆ ರಕ್ಷೆ ನೀಡುತ್ತೇನೆ. ನನ್ನ ದಾಸನ ಆತ್ಮವನ್ನು ವಶಪಡಿಸಲು ನಾನು ಹಿಂಜರಿಯುವಂತೆ, ನಾನು ಮಾಡುವ ಇತರ ಯಾವುದರ ಬಗ್ಗೆಯೂ ನಾನು ಹಿಂಜರಿಯುವುದಿಲ್ಲ. ಏಕೆಂದರೆ, ಅವನು ಮರಣವನ್ನು ಇಷ್ಟಪಡುವುದಿಲ್ಲ ಮತ್ತು ಅವನನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ."رواه البخاري
عن أبي هريرة رضي الله عنه عن رسول الله صلى الله عليه وسلم قال: «النَّاسُ مَعَادِن كَمَعَادِن الذَّهَب وَالفِضَّة، خِيَارُهُم فِي الجَاهِلِيَّة خِيَارُهُم فِي الإِسْلاَم إِذَا فَقُهُوا، والأَرْوَاحُ جُنُودٌ مُجَنَّدَة، فَمَا تَعَارَفَ مِنْهَا ائتَلَفَ، وَمَا تَنَاكَرَ مِنْهَا اخْتَلَفَ». وعن أبي هريرة رضي الله عنه قال: قال رسول الله -صلى الله عليه وسلم: «تَجِدُون النَّاسَ مَعَادِن: خِيَارُهُم فِي الجَاهِليَّة خِيَارُهُم فِي الإِسْلاَم إِذَا فَقِهُوا، وَتَجِدُون خِيَار النَّاس فِي هَذَا الشَّأْن أَشَدُّهُم كَرَاهِيَة لَه، وَتَجِدُون شَرَّ النَّاس ذَا الوَجْهَين، الَّذِي يَأْتِي هَؤُلاَء بِوَجه، وَهَؤُلاَء بِوَجْه».الحديث الأول: متفق عليه، ولفظه لمسلم؛ وروى البخاري أوله، وروى آخره عن عائشة -رضي الله عنها-. الحديث الثاني: متفق عليه
عن ابن عمر رضي الله عنهما مرفوعاً: «على المرء المسلم السمع والطاعة فيما أحب وكَرِهَ، إلا أن يُؤمر بمعصية، فإذا أُمِرَ بمعصية فلا سمع ولا طاعة».متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಲಾತ್ ಮತ್ತು ಉಝ್ಝನ ಮೇಲಾಣೆ ಎಂದು ಹೇಳುತ್ತಾ ಆಣೆ ಮಾಡಿದರೆ, ಅವನು ಲಾಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ) ಎಂದು ಹೇಳಬೇಕು. ಯಾರಾದರೂ ತನ್ನ ಸಂಗಡಿಗನೊಡನೆ ಬಾ ಜೂಜಾಡೋಣ ಎಂದು ಹೇಳಿದರೆ, ಅವನು ದಾನ-ಧರ್ಮ ಮಾಡಬೇಕು."متفق عليه
عن أبي هريرة رضي الله عنه مرفوعاً: «من أطاعني فقد أطاع الله، ومن عصاني فقد عصى الله، ومن يطع الأمير فقد أطاعني، ومن يعص الأمير فقد عصاني».متفق عليه
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ವಿಷಯಗಳ ನಡುವೆ ಆಯ್ಕೆ ನೀಡಲಾದಾಗ, ಅವರು ಯಾವಾಗಲೂ ಸುಲಭವಾದದ್ದನ್ನು ಆರಿಸಿಕೊಳ್ಳುತ್ತಿದ್ದರು, ಅದು ಪಾಪವಲ್ಲದಿದ್ದರೆ ಮಾತ್ರ. ಒಂದು ವೇಳೆ ಅದು ಪಾಪವಾಗಿದ್ದರೆ, ಅವರು ಎಲ್ಲರಿಗಿಂತ ಮೊದಲು ಅದರಿಂದ ದೂರವಾಗಿರುತ್ತಿದ್ದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸ್ವಂತಕ್ಕಾಗಿ ಎಂದಿಗೂ ಪ್ರತೀಕಾರ ತೀರಿಸಿಕೊಂಡಿರಲಿಲ್ಲ, ಆದರೆ ಅಲ್ಲಾಹನ ಪವಿತ್ರತೆಯನ್ನು ಉಲ್ಲಂಘಿಸಿದಾಗ ಹೊರತು. ಆಗ ಅವರು ಅಲ್ಲಾಹನಿಗಾಗಿ ಪ್ರತೀಕಾರ ತೀರಿಸುತ್ತಿದ್ದರು."متفق عليه
عن أبي هريرة رضي الله عنه مرفوعاً: «من مات ولم يَغْزُ، ولم يُحدث نفسه بالغزو، مات على شُعْبَةٍ من نِفَاقٍ»رواه مسلم
ಅಬೂ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಅಲ್ಲಾಹನಿಂದ ಪ್ರತಿಫಲವನ್ನು ಅಪೇಕ್ಷಿಸುತ್ತಾ ತನ್ನ ಕುಟುಂಬಕ್ಕೆ ಖರ್ಚು ಮಾಡುವುದೆಲ್ಲವೂ ದಾನವಾಗಿವೆ."متفق عليه
عن أنس بن مالك وأبي هريرة رضي الله عنهما عن النبي صلى الله عليه وسلم فيما يرويه عن ربه عز وجل قال: «إذا تَقَرَّبَ العبدُ إليَّ شِبْرًا تَقَرَّبْتُ إليه ذِرَاعًا، وإذا تَقَرَّبَ إليَّ ذِرَاعًا تَقَرَّبْتُ مِنْهُ بَاعًا، وإذا أتاني يمشي أَتَيْتُهُ هَرْوَلَةً».حديث أنس -رضي الله عنه- رواه البخاري . حديث أبي هريرة -رضي الله عنه- متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸವು (ಈಮಾನ್) ಎಪ್ಪತ್ತಕ್ಕಿಂತಲೂ — ಅಥವಾ ಅರುವತ್ತಕ್ಕಿಂತಲೂ — ಹೆಚ್ಚು ಶಾಖೆಗಳನ್ನು ಹೊಂದಿದೆ. 'ಲಾ ಇಲಾಹ ಇಲ್ಲಲ್ಲಾಹ್' ಎಂಬ ವಚನವು ಅತಿಶ್ರೇಷ್ಠ ಶಾಖೆಯಾಗಿದೆ ಮತ್ತು ರಸ್ತೆಯಿಂದ ಅಡ್ಡಿಗಳನ್ನು ನಿವಾರಿಸುವುದು ಅತ್ಯಂತ ಕೆಳಗಿನ ಶಾಖೆಯಾಗಿದೆ. ಸಂಕೋಚವು ಸತ್ಯವಿಶ್ವಾಸದ ಒಂದು ಶಾಖೆಯಾಗಿದೆ."متفق عليه
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಒಂದು ದಾರಿಯಲ್ಲಿ ನಡೆಯುತ್ತಿದ್ದಾಗ, ದಾರಿಯಲ್ಲಿ ಒಂದು ಮುಳ್ಳಿನ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ ಸರಿಸಿದನು. ಆಗ ಅಲ್ಲಾಹು ಅವನ ಕಾರ್ಯವನ್ನು ಮೆಚ್ಚಿಕೊಂಡು ಅವನ ಪಾಪಗಳನ್ನು ಕ್ಷಮಿಸಿದನು".متفق عليه
ಅದೀ ಬಿನ್ ಹಾತಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ. ಆಗ ಅವನು ತನ್ನ ಬಲಭಾಗಕ್ಕೆ ನೋಡುವನು. ಅಲ್ಲಿ ತಾನು ಮುಂದಕ್ಕೆ ಕಳುಹಿಸಿದ ಕರ್ಮಗಳಲ್ಲದೆ ಬೇರೇನೂ ಅವನು ಕಾಣುವುದಿಲ್ಲ. ಅವನು ತನ್ನ ಎಡಭಾಗಕ್ಕೆ ನೋಡುವನು. ಅಲ್ಲಿ ತಾನು ಮುಂದಕ್ಕೆ ಕಳುಹಿಸಿದ ಕರ್ಮಗಳಲ್ಲದೆ ಬೇರೇನೂ ಅವನು ಕಾಣುವುದಿಲ್ಲ. ಅವನು ತನ್ನ ಮುಂಭಾಗಕ್ಕೆ ನೋಡುವನು. ಅಲ್ಲಿ ಅವನು ತನ್ನ ಮುಂದೆ ನರಕವನ್ನಲ್ಲದೆ ಬೇರೇನೂ ಕಾಣುವುದಿಲ್ಲ. ಆದ್ದರಿಂದ ನೀವು ಒಂದು ತುಂಡು ಖರ್ಜೂರದ ಮೂಲಕವಾದರೂ ನಿಮ್ಮನ್ನು ನರಕದಿಂದ ಕಾಪಾಡಿಕೊಳ್ಳಿರಿ."متفق عليه
عن عبد الله بن عكيم رضي الله عنه مرفوعاً: «مَنْ تَعَلَّقَ شيئا وُكِلَ إليه».رواه أحمد والترمذي
ತಾರಿಕ್ ಬಿನ್ ಅಶೀಮ್ ಅಶ್ಜಈ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ."رواه مسلم
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು."رواه الترمذي وابن ماجه وأحمد
ಸಮುರ ಬಿನ್ ಜುಂದುಬ್ ಮತ್ತು ಮುಗೀರ ಬಿನ್ ಶುಅ್‌ಬ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರಿಬ್ಬರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಳ್ಳು ಎಂದು ಭಾವಿಸಲಾಗುವ ಒಂದು ಹದೀಸನ್ನು ಯಾರಾದರೂ ನನ್ನ ಹೆಸರಲ್ಲಿ ವರದಿ ಮಾಡಿದರೆ, ಅವನು ಸುಳ್ಳುಗಾರರಲ್ಲಿ ಒಬ್ಬನಾಗಿದ್ದಾನೆ."رواه مسلم في مقدمته
عن أبي هريرة رضي الله عنه أن رسول الله صلى الله عليه وسلم قال: «لا ينبغي لصِدِّيق أن يكون لعَّانًا».رواه مسلم
عن عائشة رضي الله عنها قالت: قال رسول الله صلى الله عليه وسلم : «مَنْ أحَبَّ لِقَاءَ اللهِ أَحَبَّ اللهُ لِقَاءهُ، وَمَنْ كَرِهَ لِقَاءَ اللهِ كَرِهَ اللهُ لِقَاءهُ» فقلتُ: يا رسولَ اللهِ، أكَراهِيَةُ المَوتِ، فَكُلُّنَا نَكْرَهُ المَوتَ؟ قال: «لَيْسَ كَذَلِكَ، ولكِنَّ المُؤْمِنَ إذَا بُشِّرَ بِرَحْمَةِ اللهِ وَرِضْوَانِهِ وَجَنَّتِهِ أَحَبَّ لِقَاءَ اللهِ فَأَحَبَّ اللهُ لِقَاءهُ، وإنَّ الكَافِرَ إذَا بُشِّرَ بِعَذابِ اللهِ وَسَخَطهِ كَرِهَ لِقَاءَ اللهِ وكَرِهَ اللهُ لِقَاءهُ».رواه مسلم، ورواه البخاري عن عائشة -رضي الله عنها- في ضمنه حديث عن عبادة بن الصامت-رضي الله عنه-. رواه عن أبي موسى -رضي الله عنه- مختصرا