Hadith for the World

All hadiths

The complete card collection, filter by chapter

655 hadiths

ಉಮ್ಮು ದರ್ದಾಅ್ ಮತ್ತು ಅಬೂ ದರ್ದಾಅ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು: "ಒಬ್ಬ ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ. ಅವನ ತಲೆಯ ಬಳಿ ಹೊಣೆ ವಹಿಸಿಕೊಡಲಾದ ಒಬ್ಬ ದೇವದೂತರು ಇರುತ್ತಾರೆ. ಪ್ರತಿ ಬಾರಿ ಅವನು ತನ್ನ ಸಹೋದರನಿಗಾಗಿ ಒಳಿತನ್ನು ಪ್ರಾರ್ಥಿಸಿದಾಗ, ಹೊಣೆ ವಹಿಸಿಕೊಡಲಾದ ದೇವದೂತರು ಹೇಳುತ್ತಾರೆ: 'ಆಮೀನ್ (ಅಲ್ಲಾಹನೇ, ಈ ಪ್ರಾರ್ಥನೆಯನ್ನು ಸ್ವೀಕರಿಸು), ಮತ್ತು ನಿನಗೂ ಅಂತಹದ್ದೇ ಇರಲಿ' ".رواه مسلم
ಉಮ್ಮು ಅತಿಯ್ಯಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಜನಾಝಾಗಳನ್ನು (ಮೃತದೇಹಗಳನ್ನು) ಹಿಂಬಾಲಿಸುವುದನ್ನು ನಮಗೆ (ಮಹಿಳೆಯರಿಗೆ) ನಿಷೇಧಿಸಲಾಗಿದೆ. ಆದರೆ ನಮ್ಮ ಮೇಲೆ ಅದನ್ನು ಕಟ್ಟುನಿಟ್ಟಾಗಿ ಹೇರಲಾಗಿರಲಿಲ್ಲ".متفق عليه
عن جابر بن عبد الله رضي الله عنهما مرفوعاً: «لا تدعوا على أنفسكم؛ ولا تدعوا على أولادكم، ولا تدعوا على أموالكم، لا توافقوا من الله ساعة يُسأل فيها عطاءٌ فيستجيب لكم».رواه مسلم
عن أبي هريرة رضي الله عنه مرفوعاً: يُستجاب لأحدكم ما لم يَعْجَلْ: يقول: قد دعوت ربي، فلم يستجب لي». وفي رواية لمسلم: «لا يزال يُستجاب للعبد ما لم يَدْعُ بإثم، أو قطيعة رحم، ما لم يَسْتَعْجِلْ» قيل: يا رسول الله ما الاستعجال؟ قال: «يقول: قد دعوت، وقد دعوت، فلم أر يستجب لي، فَيَسْتَحْسِرُ عند ذلك ويَدَعُ الدعاء».متفق عليه
ಅಬೂ ಉಮಾಮ ರಿಂದ ವರದಿ. ಅವರು ಹೇಳಿದರು: ಅಮ್ರ್ ಬಿನ್ ಅಬಸ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನನಗೆ ತಿಳಿಸಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು ರಾತ್ರಿಯ ಕೊನೆಯ ಮೂರನೇ ಭಾಗದಲ್ಲಿ. ಆದ್ದರಿಂದ ಆ ಸಮಯದಲ್ಲಿ ಅಲ್ಲಾಹನನ್ನು ಸ್ಮರಿಸುವವರಲ್ಲಿ ಸೇರಲು ನಿನಗೆ ಸಾಧ್ಯವಾಗುವುದಾದರೆ ಸೇರಿಕೋ."رواه أبو داود والترمذي والنسائي
ಸೌಬಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುರುಷನು ಖರ್ಚು ಮಾಡುವ ಅತಿಶ್ರೇಷ್ಠ ದೀನಾರ್ ಎಂದರೆ ಅವನು ತನ್ನ ಕುಟುಂಬಕ್ಕಾಗಿ ಖರ್ಚು ಮಾಡುವ ದೀನಾರ್, ಪುರುಷನು ಅಲ್ಲಾಹನ ಮಾರ್ಗದಲ್ಲಿ ತನ್ನ ಸವಾರಿಗಾಗಿ ಖರ್ಚು ಮಾಡುವ ದೀನಾರ್, ಮತ್ತು ಅವನು ಅಲ್ಲಾಹನ ಮಾರ್ಗದಲ್ಲಿ ತನ್ನ ಸಹಚರರಿಗಾಗಿ ಖರ್ಚು ಮಾಡುವ ದೀನಾರ್." ಅಬೂ ಕಿಲಾಬ ಹೇಳಿದರು: "ಅವರು ಕುಟುಂಬದಿಂದ ಆರಂಭಿಸಿದರು." ನಂತರ ಅಬೂ ಕಿಲಾಬ ಹೇಳಿದರು: "ತನ್ನ ಕುಟುಂಬದ ಕಿರಿಯ ಸದಸ್ಯರಿಗಾಗಿ ಖರ್ಚು ಮಾಡುವ ಪುರುಷನಿಗಿಂತ ಹೆಚ್ಚು ಪ್ರತಿಫಲ ಪಡೆಯುವವರು ಯಾರಿದ್ದಾರೆ? ಅವನ ಮೂಲಕ ಅಲ್ಲಾಹು ಅವರನ್ನು ಪರಿಶುದ್ಧರನ್ನಾಗಿ ಮಾಡುತ್ತಾನೆ ಅಥವಾ ಅವರಿಗೆ ಪ್ರಯೋಜನವನ್ನು ನೀಡುತ್ತಾನೆ ಮತ್ತು ಅವರನ್ನು ಶ್ರೀಮಂತಗೊಳಿಸುತ್ತಾನೆ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಈ ಸಮುದಾಯದಲ್ಲಿ ಸೇರಿದ ಯಹೂದಿಗಳು, ಕ್ರೈಸ್ತರು ಅಥವಾ ಇತರ ಯಾರೇ ಆಗಲಿ, ನನ್ನ ಬಗ್ಗೆ ಕೇಳಿಯೂ, ನನ್ನನ್ನು ಯಾವ ಸಂದೇಶದೊಂದಿಗೆ ಕಳುಹಿಸಲಾಗಿದೆಯೋ ಅದರಲ್ಲಿ ವಿಶ್ವಾಸವಿಡದೆ ಸಾವನ್ನಪ್ಪಿದರೆ, ಅವರು ನರಕವಾಸಿಗಳಲ್ಲಿ ಸೇರುವುದು ಖಚಿತ."رواه مسلم
عن أبي هريرة رضي الله عنه مرفوعاً: «الإيمانُ بِضْعٌ وَسَبْعُونَ أو بِضْعٌ وسِتُّونَ شُعْبَةً: فَأَفْضَلُهَا قَوْلُ: لا إله إلا الله، وَأَدْنَاهَا إِمَاطَةُ الأَذَى عَنِ الطَّرِيقِ، وَالحَيَاءُ شُعْبَةٌ مِنَ الإِيمَانِ».متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ಮುಸ್ಲಿಂ ದಾಸನು - ಅಥವಾ ಸತ್ಯವಿಶ್ವಾಸಿಯು - ವುಝೂ (ಶುದ್ಧೀಕರಣ) ಮಾಡಿ, ತನ್ನ ಮುಖವನ್ನು ತೊಳೆದಾಗ, ಅವನು ತನ್ನ ಕಣ್ಣುಗಳಿಂದ ನೋಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಮುಖದಿಂದ ಹೊರಬರುತ್ತದೆ. ಅವನು ತನ್ನ ಕೈಗಳನ್ನು ತೊಳೆದಾಗ, ಅವನ ಕೈಗಳಿಂದ ಮಾಡಿದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಕೈಗಳಿಂದ ಹೊರಬರುತ್ತದೆ. ಅವನು ತನ್ನ ಕಾಲುಗಳನ್ನು ತೊಳೆದಾಗ, ಅವನ ಕಾಲುಗಳಿಂದ ನಡೆದ ಪ್ರತಿಯೊಂದು ಕಿರಿಯ ಪಾಪವು ನೀರಿನೊಂದಿಗೆ - ಅಥವಾ ನೀರಿನ ಕೊನೆಯ ಹನಿಯೊಂದಿಗೆ - ಅವನ ಕಾಲುಗಳಿಂದ ಹೊರಬರುತ್ತದೆ. ಎಷ್ಟರವರೆಗೆಂದರೆ ಅವನು ಪಾಪಗಳಿಂದ ಶುದ್ಧನಾಗಿ ಹೊರಬರುವವರೆಗೆ."رواه مسلم
عن معاذ بن أنس رضي الله عنه مرفوعًا: «مَن كَظَمَ غَيظًا، وَهُو قادر على أن يُنفِذَه، دَعَاه الله سبحانه وتعالى على رؤوس الخَلاَئِق يوم القيامة حتَّى يُخَيِّره من الحُور العَين مَا شَاء».رواه أبو داود والترمذي وابن ماجه وأحمد
ಜಾಬಿರ್ ಬಿನ್ ಅಬ್ದಿಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಕುರ್‌ಆನ್‌ನ ಒಂದು ಸೂರಃವನ್ನು (ಅಧ್ಯಾಯವನ್ನು) ಕಲಿಸುವಂತೆ ಪ್ರತಿಯೊಂದು ವಿಷಯದಲ್ಲೂ ಇಸ್ತಿಖಾರ (ಮಾರ್ಗದರ್ಶನಕ್ಕಾಗಿ ಪ್ರಾರ್ಥನೆ) ಮಾಡುವುದನ್ನು ಕಲಿಸುತ್ತಿದ್ದರು. ಅವರು ಹೇಳುತ್ತಿದ್ದರು: 'ನಿಮ್ಮಲ್ಲಿ ಯಾರಿಗಾದರೂ ಒಂದು ವಿಷಯವನ್ನು ಮಾಡಲು ಉದ್ದೇಶವಿದ್ದರೆ, ಅವನು ಫರ್ದ್ (ಕಡ್ಡಾಯ) ಅಲ್ಲದ ಎರಡು ರಕ್‌ಅತ್ ನಮಾಝ್ ಮಾಡಲಿ. ನಂತರ ಹೀಗೆ ಹೇಳಲಿ: 'ಅಲ್ಲಾಹುಮ್ಮ ಇನ್ನೀ ಅಸ್ತಖೀರುಕ ಬಿ ಇಲ್ಮಿಕ, ವ ಅಸ್ತಕ್ದಿರುಕ ಬಿ ಕುದ್ರತಿಕ, ವ ಅಸ್ಅಲುಕ ಮಿನ್ ಫದ್ಲಿಕಲ್ ಅಝೀಮ್, ಫ ಇನ್ನಕ ತಕ್ದಿರು ವಲಾ ಅಕ್ದಿರು, ವ ತಅ್‌ಲಮು ವಲಾ ಅಅ್‌ಲಮು, ವ ಅಂತ ಅಲ್ಲಾಮುಲ್ ಗುಯೂಬ್. ಅಲ್ಲಾಹುಮ್ಮ ಇನ್ ಕುಂತ ತಅ್‌ಲಮು ಅನ್ನ ಹಾಧಲ್ ಅಮ್ರ (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ಖೈರುನ್ ಲೀ ಫೀ ದೀನೀ, ವ ಮಆಶೀ, ವ ಆಖಿಬತಿ ಅಮ್‌ರೀ (ಅಥವಾ ಅವರು ಹೀಗೆ ಹೇಳಿದರು: ಆಜಿಲಿ ಅಮ್‌ರೀ ವ ಆಜಿಲಿಹಿ), ಫಕ್ದುರ್‌ಹು ಲೀ ವ ಯಸ್ಸಿರ್‌ಹು ಲೀ ಸುಮ್ಮ ಬಾರಿಕ್ ಲೀ ಫೀಹಿ. ವ ಇನ್ ಕುಂತ ತಅ್‌ಲಮು ಅನ್ನ ಹಾಧಲ್ ಅಮ್ರ ಶರ್ರುನ್ ಲೀ ಫೀ ದೀನೀ ವ ಮಆಶೀ ವ ಆಖಿಬತಿ ಅಮ್‌ರೀ (ಅಥವಾ ಅವರು ಹೀಗೆ ಹೇಳಿದರು: ಫೀ ಆಜಿಲಿ ಅಮ್‌ರೀ ವ ಆಜಿಲಿಹಿ), ಫಸ್‌ರಿಫ್‌ಹು ಅನ್ನೀ ವಸ್‌ರಿಫ್‌ನೀ ಅನ್‌ಹು, ವಕ್ದುರ್ ಲಿಯಲ್ ಖೈರ ಹೈಸು ಕಾನ, ಸುಮ್ಮ ಅರ್ದಿನೀ ಬಿಹಿ.' (ಅರ್ಥ: 'ಓ ಅಲ್ಲಾಹ್, ನಿನ್ನ ಜ್ಞಾನದ ಮೂಲಕ ನಾನು ನಿನ್ನಿಂದ ಮಾರ್ಗದರ್ಶನವನ್ನು ಕೋರುತ್ತೇನೆ, ನಿನ್ನ ಸಾಮರ್ಥ್ಯದ ಮೂಲಕ ನಾನು ನಿನ್ನಿಂದ ಶಕ್ತಿಯನ್ನು ಕೋರುತ್ತೇನೆ ಮತ್ತು ನಿನ್ನ ಮಹಾ ಅನುಗ್ರಹವನ್ನು ಬೇಡುತ್ತೇನೆ. ನಿಸ್ಸಂದೇಹವಾಗಿ, ನೀನು ಸಾಮರ್ಥ್ಯವುಳ್ಳವನು ಮತ್ತು ನಾನು ಸಾಮರ್ಥ್ಯಹೀನನು. ನೀನು ತಿಳಿದಿರುವವನು ಮತ್ತು ನಾನು ತಿಳಿದಿಲ್ಲದವನು, ಮತ್ತು ನೀನು ಎಲ್ಲಾ ಅಗೋಚರ ವಿಷಯಗಳನ್ನು ಬಲ್ಲವನು. ಓ ಅಲ್ಲಾಹ್‌, ಈ ವಿಷಯವು (ಇಲ್ಲಿ ತನ್ನ ಅಗತ್ಯವನ್ನು ಹೇಳಿಕೊಳ್ಳಲಿ) ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಒಳ್ಳೆಯದೆಂದು ನಿನಗೆ ತಿಳಿದಿದ್ದರೆ, ಅದನ್ನು ನನಗಾಗಿ ನಿರ್ಣಯಿಸು, ಅದನ್ನು ನನಗೆ ಸುಲಭಗೊಳಿಸು ಮತ್ತು ನಂತರ ಅದರಲ್ಲಿ ನನಗೆ ಸಮೃದ್ಧಿಯನ್ನು ನೀಡು. ಮತ್ತು ಈ ವಿಷಯವು ನನ್ನ ಧರ್ಮಕ್ಕೆ, ನನ್ನ ಜೀವನೋಪಾಯಕ್ಕೆ ಮತ್ತು ನನ್ನ ಅಂತಿಮ ಫಲಿತಾಂಶಕ್ಕೆ (ಅಥವಾ ಅವರು ಹೀಗೆ ಹೇಳಿದರು: ನನ್ನ ಪ್ರಸ್ತುತ ಮತ್ತು ಭವಿಷ್ಯದ ವಿಷಯಗಳಿಗೆ) ಕೆಟ್ಟದ್ದೆಂದು ನಿನಗೆ ತಿಳಿದಿದ್ದರೆ, ಅದನ್ನು ನನ್ನಿಂದ ದೂರ ಮಾಡು ಮತ್ತು ನನ್ನನ್ನು ಅದರಿಂದ ದೂರ ಮಾಡು. ಒಳಿತು ಎಲ್ಲೇ ಇದ್ದರೂ ಅದನ್ನು ನನಗಾಗಿ ನಿರ್ಣಯಿಸು, ಮತ್ತು ನಂತರ ಅದರಿಂದ ನನ್ನನ್ನು ತೃಪ್ತಿಪಡಿಸು.')" ಅವರು (ಜಾಬಿರ್) ಹೇಳಿದರು: "ಮತ್ತು ಅವನು ತನ್ನ ಅಗತ್ಯವನ್ನು ಹೆಸರಿಸಬೇಕು."رواه البخاري
عن أنس بن مالك رضي الله عنه قال: مرَّ النَّبي - صلى الله عليه وسلم - بامرَأَة تَبكِي عِند قَبرٍ، فقال: «اتَّقِي الله واصْبِري» فقالت: إليك عَنِّي؛ فَإِنَّك لم تُصَب بِمُصِيبَتِي ولم تَعرِفه، فقِيل لها: إِنَّه النَّبِي - صلى الله عليه وسلم - فأتت باب النبي - صلى الله عليه وسلم - فلم تجد عنده بوَّابِين، فقالت: لم أَعرِفكَ، فقال: «إِنَّما الصَّبرُ عِند الصَّدمَةِ الأُولَى». وفي رواية: «تَبكِي على صبِّي لها».متفق عليه
ಸುಹೈಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸತ್ಯವಿಶ್ವಾಸಿಯ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ! ಅವನ ಎಲ್ಲಾ ವಿಷಯಗಳೂ ಅವನಿಗೆ ಒಳಿತಾಗಿವೆ. ಇದು ಒಬ್ಬ ಸತ್ಯವಿಶ್ವಾಸಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೇನಾದರೂ ಒಳ್ಳೆಯದು ಸಂಭವಿಸಿದರೆ ಅವನು ಕೃತಜ್ಞನಾಗುತ್ತಾನೆ, ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೇನಾದರೂ ತೊಂದರೆ ಬಾಧಿಸಿದರೆ ಅವನು ತಾಳ್ಮೆ ತೋರುತ್ತಾನೆ. ಅದು ಕೂಡ ಅವನಿಗೆ ಒಳಿತಾಗಿದೆ."رواه مسلم
عن عائشة رضي الله عنها قالت: كَانَ كَلاَمُ رَسُولِ الله -صلَّى الله عليه وسلَّم- كَلاَمًا فَصلاً يَفْهَمُهُ كُلُّ مَنْ يَسْمَعُهُ.رواه أبو داود واللفظ له، والتُرمذي والنسائي وأحمد
عن أبي سعيد الخدري رضي الله عنه مرفوعاً: «إِنَّ مِنْ أَشَرِّ النَّاسِ عِندَ الله مَنزِلَةً يَومَ القِيَامَةِ الرَّجُلَ يُفضِي إِلَى المَرْأَةِ وَتُفْضِي إِلَيه، ثُمَّ يَنشُرُ سِرَّهَا».رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.”متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ. ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಅಲ್ಲಾಹು ಶಪಿಸಿದ್ದಾನೆ."رواه أحمد
عن أنس بن مالك رضي الله عنه عن النبي صلى الله عليه وسلم أنه قال: "إن عِظَمَ الجزاءِ مع عِظَمِ البلاءِ، وإن الله تعالى إذا أحب قوما ابتلاهم، فمن رَضِيَ فله الرِضا، ومن سَخِطَ فله السُّخْطُ".رواه الترمذي وابن ماجه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಾನು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿರುವವನು. ಯಾರು ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ಇತರರನ್ನು ಸಹಭಾಗಿಯಾಗಿ ಮಾಡುತ್ತಾನೋ, ನಾನು ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ತೊರೆದು ಬಿಡುವೆನು”.رواه مسلم
عن علي بن أبي طالب رضي الله عنه قال: "حدثوا الناس بما يعرفون، أتريدون أن يُكذَّب اللهُ ورسولهُ؟".أخرجه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ; ನನ್ನ ಸಮಾಧಿಯನ್ನು ಉತ್ಸವ ಸ್ಥಳವಾಗಿ ಮಾಡಬೇಡಿ; ನನ್ನ ಮೇಲೆ ಸ್ವಲಾತ್ ಹೇಳಿರಿ, ನೀವು ಎಲ್ಲಿದ್ದರೂ ನಿಶ್ಚಯವಾಗಿಯೂ ನಿಮ್ಮ ಸ್ವಲಾತ್ ನನ್ನನ್ನು ತಲುಪುತ್ತದೆ.”رواه أبو داود
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಒಬ್ಬ ಸತ್ಯವಿಶ್ವಾಸಿಯೂ ಸಹ ರಕ್ಷಣಾತ್ಮಕ ಈರ್ಷ್ಯೆಯನ್ನು ಹೊಂದಿದ್ದಾನೆ. ಸತ್ಯವಿಶ್ವಾಸಿಯು ಅಲ್ಲಾಹು ನಿಷೇಧಿಸಿದ್ದನ್ನು ಮಾಡುವುದು ಅಲ್ಲಾಹನ ಈರ್ಷ್ಯೆಯನ್ನು ಉದ್ರೇಕಿಸುತ್ತದೆ.”متفق عليه
عن أبي هريرة رضي الله عنه مرفوعًا: «إِذَا لَبِسْتُم، وَإِذَا تَوَضَّأتُم، فَابْدَأُوا بَأَيَامِنُكُم».رواه أبو داود واللفظ له، والترمذي وابن ماجه وأحمد
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಇಬ್ಬರು ಹೆಣ್ಣು ಮಕ್ಕಳನ್ನು ಅವರು ಪ್ರಾಯಕ್ಕೆ ಬರುವವರೆಗೆ ಪೋಷಿಸುತ್ತಾರೋ, ಅವರು ಮತ್ತು ನಾನು ಪುನರುತ್ಥಾನ ದಿನದಂದು ಹೀಗೆ ಬರುವೆವು." (ಹೀಗೆ ಹೇಳುತ್ತಾ) ಅವರು ತಮ್ಮ ಬೆರಳುಗಳನ್ನು ಜೋಡಿಸಿದರು.رواه مسلم