Hadith for the World
Jurisprudence of Acts of Worship

Fasting

40 hadiths

40 hadiths

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಹೇಳಿದನು: ಆದಮರ ಪುತ್ರ ಮಾಡುವ ಎಲ್ಲಾ ಕರ್ಮಗಳು ಅವನಿಗೇ ಆಗಿವೆ; ಉಪವಾಸದ ಹೊರತು. ಅದು ನನಗಾಗಿದೆ ಮತ್ತು ನಾನೇ ಅದಕ್ಕೆ ಪ್ರತಿಫಲವನ್ನು ನೀಡುತ್ತೇನೆ. ಉಪವಾಸವು ಗುರಾಣಿಯಾಗಿದೆ. ನಿಮ್ಮೆಲ್ಲೊಬ್ಬನು ಉಪವಾಸದಲ್ಲಿರುವಾಗ ಅಶ್ಲೀಲವಾಗಿ ವರ್ತಿಸದಿರಲಿ ಅಥವಾ ಉಚ್ಚ ಸ್ವರದಲ್ಲಿ ಮಾತನಾಡದಿರಲಿ. ಯಾರಾದರೂ ಅವನನ್ನು ದೂಷಿಸಿದರೆ ಅಥವಾ ಅವನೊಂದಿಗೆ ಜಗಳವಾಡಿದರೆ, ಅವನು "ನಾನು ಉಪವಾಸದಲ್ಲಿದ್ದೇನೆ" ಎಂದು ಹೇಳಲಿ. ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಉಪವಾಸಿಗನ ಬಾಯಿಯ ದುರ್ಗಂಧವು ಅಲ್ಲಾಹನ ಬಳಿ ಕಸ್ತೂರಿಗಿಂತಲೂ ಹೆಚ್ಚು ಪರಿಮಳವುಳ್ಳದ್ದಾಗಿದೆ. ಉಪವಾಸಿಗನಿಗೆ ಎರಡು ಸಂತೋಷಗಳಿದ್ದು ಅವನು ಆ ಸಂತೋಷಗಳನ್ನು ಆಸ್ವಾದಿಸುತ್ತಾನೆ: ಒಂದು: ಉಪವಾಸ ಪಾರಣೆ ಮಾಡುವಾಗ ದೊರೆಯುವ ಸಂತೋಷ, ಇನ್ನೊಂದು ಉಪವಾಸದ ಮೂಲಕ ಅವನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವಾಗ ದೊರೆಯುವ ಸಂತೋಷ."متفق عليه
ಸಹ್ಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. (ಆ ದಿನ) 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಲ್ಲುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರೆಲ್ಲರೂ ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ".متفق عليه
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ ಪರಿಶ್ರಮಿಸದಷ್ಟು ಪರಿಶ್ರಮಿಸುತ್ತಿದ್ದರು."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”متفق عليه
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸವನ್ನು ಆಚರಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರ ಮಾಡುತ್ತಾನೆ."متفق عليه
ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರು ಉಪವಾಸವನ್ನು ಬೇಗನೆ ತೊರೆಯುವವರೆಗೆ ಅವರು ಒಳಿತಿನಲ್ಲಿರುತ್ತಾರೆ."متفق عليه
ಝೈದ್ ಬಿನ್ ಸಾಬಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು ಕೇಳಿದೆ: 'ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು?' ಅವರು ಹೇಳಿದರು: 'ಸುಮಾರು ಐವತ್ತು ಆಯತ್‌ಗಳಷ್ಟು.'"متفق عليه
ಸತ್ಯವಿಶ್ವಾಸಿಗಳ ಮಾತೆ ಮತ್ತು ಪ್ರವಾದಿಪತ್ನಿ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಅಲ್ಲಾಹು ಮರಣವನ್ನು ನೀಡುವವರೆಗೆ ಈತಿಕಾಫ್ (ಏಕಾಂತ ಆರಾಧನೆ) ಮಾಡುತ್ತಿದ್ದರು. ಅವರ ನಂತರ ಅವರ ಪತ್ನಿಯರು ಈತಿಕಾಫ್ ಕೂರುತ್ತಿದ್ದರು."متفق عليه
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನೀವು ಸಹರಿ ಸೇವಿಸಿರಿ, ಏಕೆಂದರೆ ಸಹರಿಯಲ್ಲಿ ಸಮೃದ್ಧಿ (ಬರಕತ್) ಇದೆ."متفق عليه
ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಜನರು ಗುಂಪುಗೂಡಿ ಒಬ್ಬ ವ್ಯಕ್ತಿಗೆ ನೆರಳು ನೀಡುತ್ತಿರುವುದನ್ನು ಕಂಡರು. ಅವರು (ಪ್ರವಾದಿ) ಕೇಳಿದರು: "ಇದೇನು?". ಜನರು ಹೇಳಿದರು: "ಆತ ಉಪವಾಸದಲ್ಲಿದ್ದಾನೆ". ಆಗ ಅವರು (ಪ್ರವಾದಿ) ಹೇಳಿದರು: "ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ". ಇಮಾಮ್ ಮುಸ್ಲಿಂ ರವರ ಇನ್ನೊಂದು ವರದಿಯಲ್ಲಿ ಹೀಗಿದೆ: "ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು ಸ್ವೀಕರಿಸಿಕೊಳ್ಳಿರಿ".متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನೀವು ರಮದಾನ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸಬಾರದು. ಆದರೆ ವಾಡಿಕೆಯ ಉಪವಾಸವನ್ನು ಆಚರಿಸುವವನ ಹೊರತು. ಅವನು ಅದನ್ನು ಆಚರಿಸಬಹುದು."متفق عليه
عن عائشة وأم سلمة رضي الله عنهما «أن رسول الله صلى الله عليه وسلم كان يُدْرِكُهُ الفجر وهو جُنٌبٌ من أهله، ثم يغتسل ويصوم ».متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಉಪವಾಸದಲ್ಲಿದ್ದಾಗ ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಲಿ. ಏಕೆಂದರೆ ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದ್ದಾನೆ."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನನ್ನ ಗೆಳೆಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಮೂರು ವಿಷಯಗಳ ಉಪದೇಶ ಮಾಡಿದರು: ಪ್ರತೀ ತಿಂಗಳಲ್ಲಿ ಮೂರು ದಿನ ಉಪವಾಸ ಆಚರಿಸುವುದು, ಎರಡು ರಕ್‌ಅತ್ ದುಹಾ ನಮಾಝ್ ನಿರ್ವಹಿಸುವುದು ಮತ್ತು ಮಲಗುವುದಕ್ಕೆ ಮೊದಲು ವಿತ್ರ್ ನಮಾಝ್ ನಿರ್ವಹಿಸುವುದು."متفق عليه
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ರಮದಾನ್ ತಿಂಗಳ ಕೊನೆಯ ಹತ್ತು ರಾತ್ರಿಗಳಲ್ಲಿರುವ ಬೆಸ ರಾತ್ರಿಗಳಲ್ಲಿ ಲೈಲತುಲ್ ಖದ್ರ್ ಅನ್ನು ಹುಡುಕಿರಿ."متفق عليه
عن عمر بن الخطاب رضي الله عنه قال: قال رسول الله صلى الله عليه وسلم : «إذا أقبل الليل من هَهُنا، وأَدْبَرَالنهار من ههنا، فقد أفطر الصائم».متفق عليه
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನೀವು ಅದನ್ನು (ಚಂದ್ರನನ್ನು) ಕಂಡರೆ ಉಪವಾಸವನ್ನು ಪ್ರಾರಂಭಿಸಿರಿ, ಮತ್ತು ನೀವು ಅದನ್ನು ಕಂಡರೆ ಉಪವಾಸವನ್ನು ನಿಲ್ಲಿಸಿರಿ. ಮೋಡಗಳ ಕಾರಣ ನಿಮಗೆ ಅದನ್ನು ಕಾಣಲಾಗದಿದ್ದರೆ ಮೂವತ್ತು ದಿನಗಳನ್ನು ಪೂರ್ಣಗೊಳಿಸಿರಿ."متفق عليه
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "(ರಮದಾನ್ ತಿಂಗಳ ಕೊನೆಯ) ಹತ್ತು ದಿನಗಳು ಪ್ರಾರಂಭವಾದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿಯನ್ನು ಜೀವಂತಗೊಳಿಸುತ್ತಿದ್ದರು, ತಮ್ಮ ಕುಟುಂಬವನ್ನು ಎಬ್ಬಿಸುತ್ತಿದ್ದರು, ಪರಿಶ್ರಮಪಡುತ್ತಿದ್ದರು ಮತ್ತು ತಮ್ಮ ಧೋತಿಯನ್ನು ಬಿಗಿಗೊಳಿಸುತ್ತಿದ್ದರು."متفق عليه
عن أبي هريرة رضي الله عنه مرفوعًا: «تُعْرَضُ الأعمالُ يومَ الاثنين والخميس، فَأُحِبُّ أَنْ يُعْرَضَ عَملي وأنا صائم». وفي رواية: «تُفْتَحُ أبوابُ الجَنَّةِ يومَ الاثنين والخميس، فَيُغْفَرُ لكلِّ عبد لا يُشْرِكُ بالله شيئا، إِلا رجلا كان بينه وبين أخيه شَحْنَاءُ، فَيُقَالُ: أَنظِروا هذيْن حتى يَصْطَلِحَا، أنظروا هذين حتى يصطلحا». وفي رواية: «تُعْرَضُ الأَعْمَالُ في كلِّ اثْنَيْنِ وَخَميسٍ، فَيَغْفِرُ اللهُ لِكُلِّ امْرِئٍ لا يُشْرِكُ بالله شيئاً، إِلاَّ امْرَءاً كانت بينه وبين أخِيهِ شَحْنَاءُ، فيقول: اتْرُكُوا هذَيْنِ حتى يَصْطَلِحَا».حديث أبي هريرة الأول رواه الترمذي. والحديثان الآخران هما حديث واحد، رواه مسلم، وكرر لفظة: "أنظروا هذين حتى يصطلحا" ثلاثاً
عن عمرو بن العاص رضي الله عنه أن رسول الله صلى الله عليه وسلم قال: «فَصْلُ مَا بَيْنَ صِيَامِنَا وصِيَامِ أهْلِ الكِتَابِ، أكْلَةُ السَّحَرِ».رواه مسلم
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಲ್ಲೇ ಅತ್ಯಂತ ಉದಾರಿಯಾಗಿದ್ದರು. ರಮದಾನ್ ತಿಂಗಳಲ್ಲಿ ಜಿಬ್ರೀಲ್ ಅವರನ್ನು ಭೇಟಿಯಾಗುವಾಗ ಅವರು ಹಿಂದೆಂದಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು. ಅವರು (ಜಿಬ್ರೀಲ್) ರಮದಾನ್ ತಿಂಗಳ ಎಲ್ಲಾ ರಾತ್ರಿಗಳಲ್ಲೂ ಅವರನ್ನು ಭೇಟಿಯಾಗಿ ಕುರ್‌ಆನ್ ಅನ್ನು ಪುನರಾವಲೋಕನ ಮಾಡಿಕೊಳ್ಳುತ್ತಿದ್ದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೀಸುವ ಗಾಳಿಗಿಂತಲೂ ಹೆಚ್ಚು ಉದಾರಿಯಾಗುತ್ತಿದ್ದರು."متفق عليه
عن أنس بن مالك رضي الله عنه قال: كان رسولُ اللهِ صلى الله عليه وسلم يُفطِر قبْل أن يصلي على رُطَبات، فإن لم تكنْ رُطَباتٌ فَتُمَيْراتٌ، فإن لم تكنْ تُمَيْراتٌ، حَسَا حَسَواتٍ مِن ماء.رواه أبو داود والترمذي وأحمد
عن عائشة رضي الله عنها قالت: لم يكن النبي صلى الله عليه وسلم يصوم مِنْ شهر أكثر من شعبان، فإنّه كان يصوم شعبان كله. وفي رواية: كان يصوم شعبان إلا قليلا.متفق عليه