Hadith for the World
Virtues

Merits of the Noble Qur'an

5 hadiths

5 hadiths

عن أبي أمامة رضي الله عنه قال: سمعتُ رسولَ اللهِ صلى الله عليه وسلم يقولُ: «اقْرَؤُوا القرْآنَ؛ فَإنَّهُ يَأتِي يَوْمَ القِيَامَةِ شَفِيعًا لأَصْحَابِهِ».رواه مسلم
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ."رواه الترمذي
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನ್‌ನಲ್ಲಿ ಪರಿಣಿತನಾದವನು ಗೌರವಾನ್ವಿತ, ವಿಧೇಯ ಬರಹಗಾರರೊಂದಿಗೆ (ದೇವದೂತರು) ಇರುವನು. ಯಾರು ಕುರ್‌ಆನ್ ಓದುವಾಗ ಅದರಲ್ಲಿ ತಡವರಿಸುತ್ತಾನೋ, ಮತ್ತು ಅದು ಅವನಿಗೆ ಕಷ್ಟಕರವಾಗಿದೆಯೋ, ಅವನಿಗೆ ಎರಡು ಪ್ರತಿಫಲಗಳಿವೆ".متفق عليه
ಅಬೂ ಉಮಾಮಾ ಅಲ್-ಬಾಹಿಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಕುರ್‌ಆನ್ ಅನ್ನು ಪಠಿಸಿರಿ. ಏಕೆಂದರೆ, ಖಂಡಿತವಾಗಿಯೂ ಅದು ಪುನರುತ್ಥಾನ ದಿನದಂದು ತನ್ನ ಸಂಗಾತಿಗಳಿಗೆ (ಅದನ್ನು ಪಠಿಸುವವರಿಗೆ ಮತ್ತು ಪಾಲಿಸುವವರಿಗೆ) ಶಿಫಾರಸ್ಸುದಾರನಾಗಿ ಬರುತ್ತದೆ. 'ಅಝ್ಝಹ್ರಾವೈನ್' ಗಳಾದ ಸೂರಃ ಅಲ್-ಬಖರ ಮತ್ತು ಸೂರಃ ಆಲ್-ಇಮ್ರಾನ್ ಅನ್ನು ಪಠಿಸಿರಿ. ಏಕೆಂದರೆ, ಖಂಡಿತವಾಗಿಯೂ ಅವೆರಡೂ ಪುನರುತ್ಥಾನ ದಿನದಂದು ಎರಡು ಮೋಡಗಳಂತೆ, ಅಥವಾ ಎರಡು ನೆರಳು ನೀಡುವ ವಸ್ತುಗಳಂತೆ, ಅಥವಾ ಸಾಲಾಗಿ ಹಾರಾಡುವ ಎರಡು ಪಕ್ಷಿಗಳ ಗುಂಪುಗಳಂತೆ ಬಂದು, ತಮ್ಮ ಸಂಗಾತಿಗಳ ಪರವಾಗಿ ವಾದಿಸುತ್ತವೆ. ಸೂರಃ ಅಲ್-ಬಖರವನ್ನು ಪಠಿಸಿರಿ. ಖಂಡಿತವಾಗಿಯೂ ಅದನ್ನು (ಪಠಿಸುವುದು/ಪಾಲಿಸುವುದು) 'ಬರಕತ್' (ಸಮೃದ್ಧಿ) ಆಗಿದೆ, ಮತ್ತು ಅದನ್ನು ಬಿಡುವುದು 'ಹಸ್ರತ್' (ವಿಷಾದ) ಆಗಿದೆ, ಮತ್ತು ಮಾಟಗಾರರು ಅದನ್ನು ಎದುರಿಸಲು ಸಾಧ್ಯವಿಲ್ಲ".رواه مسلم
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್‌ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."رواه أبو داود والترمذي والنسائي في الكبرى وأحمد