Hadith for the World
Virtues

Merits of Supplication

5 hadiths

5 hadiths

ಉಮ್ಮು ದರ್ದಾಅ್ ಮತ್ತು ಅಬೂ ದರ್ದಾಅ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು: "ಒಬ್ಬ ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ. ಅವನ ತಲೆಯ ಬಳಿ ಹೊಣೆ ವಹಿಸಿಕೊಡಲಾದ ಒಬ್ಬ ದೇವದೂತರು ಇರುತ್ತಾರೆ. ಪ್ರತಿ ಬಾರಿ ಅವನು ತನ್ನ ಸಹೋದರನಿಗಾಗಿ ಒಳಿತನ್ನು ಪ್ರಾರ್ಥಿಸಿದಾಗ, ಹೊಣೆ ವಹಿಸಿಕೊಡಲಾದ ದೇವದೂತರು ಹೇಳುತ್ತಾರೆ: 'ಆಮೀನ್ (ಅಲ್ಲಾಹನೇ, ಈ ಪ್ರಾರ್ಥನೆಯನ್ನು ಸ್ವೀಕರಿಸು), ಮತ್ತು ನಿನಗೂ ಅಂತಹದ್ದೇ ಇರಲಿ' ".رواه مسلم
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಪ್ರಾರ್ಥನೆಯೇ ಆರಾಧನೆ." ನಂತರ ಅವರು ಪಠಿಸಿದರು: “ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದನು: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುತ್ತೇನೆ. ನನ್ನನ್ನು ಆರಾಧಿಸಲು ಯಾರು ಅಹಂಕಾರ ತೋರುತ್ತಾರೋ ಅವರು ನಿಂದನೀಯ ಸ್ಥಿತಿಯಲ್ಲಿ ನರಕವನ್ನು ಪ್ರವೇಶಿಸುವರು.”رواه أبو داود والترمذي وابن ماجه وأحمد
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”رواه الترمذي وابن ماجه وأحمد
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಅಸುನೀಗಿದರೆ ಅವನ ಕರ್ಮಗಳೆಲ್ಲವೂ ಮುಕ್ತಾಯವಾಗುತ್ತವೆ. ಆದರೆ ಮೂರು ವಿಷಯಗಳು ಇದಕ್ಕೆ ಹೊರತಾಗಿವೆ. ನಡೆಯುತ್ತಿರುವ ದಾನ-ಧರ್ಮಗಳು, ಪ್ರಯೋಜನಪಡೆಯಲಾಗುತ್ತಿರುವ ಜ್ಞಾನಗಳು ಮತ್ತು ಅವನಿಗಾಗಿ ಪ್ರಾರ್ಥಿಸುವ ಅವನ ನೀತಿವಂತ ಮಕ್ಕಳು."رواه مسلم
عن أبي هريرة أن رسول الله صلى الله عليه وسلم ذكر يوم الجمعة، فقال: «فيه ساعة، لا يوافقها عبدٌ مسلمٌ، وهو قائم يصلي، يسأل الله تعالى شيئًا، إلا أعطاه إياه» وأشار بيده يقللها.متفق عليه