Hadith for the World
Tap the image to view it full size
ಫಿಕ್ಹ್ ಮತ್ತು ಉಸುಲ್-ಎ-ಫಿಖ್

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:

Available in 33 languages
«ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಹೇಳುತ್ತಾನೆ: ಪುನರುತ್ಥಾನದ ದಿನ ಮೂರು ವಿಧದ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ: ನನ್ನ ಹೆಸರಿನಲ್ಲಿ ಪ್ರಮಾಣ ಮಾಡಿ (ಒಪ್ಪಂದ ಮಾಡಿಕೊಂಡು) ನಂತರ ದ್ರೋಹ ಮಾಡಿದವನು; ಸ್ವತಂತ್ರ ವ್ಯಕ್ತಿಯನ್ನು ಮಾರಿ ಆ ಹಣವನ್ನು ತಿಂದವನು; ಮತ್ತು ಒಬ್ಬ ಕೂಲಿಕಾರನನ್ನು ಕೆಲಸಕ್ಕೆ ನೇಮಿಸಿಕೊಂಡು, ಅವನಿಂದ ಪೂರ್ತಿ ಕೆಲಸ ಮಾಡಿಸಿಕೊಂಡು, ನಂತರ ಅವನ ಕೂಲಿಯನ್ನು ನೀಡದವನು."»

Meaning translation ·

Explanation

The meaning in a few plain lines

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೀಗೆ ಹೇಳುತ್ತಾನೆ: "ಪುನರುತ್ಥಾನದ ದಿನ ಮೂರು ಬಗೆಯ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ. ನಾನು ಯಾರಿಗೆ ಎದುರಾಳಿಯಾಗುತ್ತೇನೋ, ಅವರನ್ನು ನಾನು (ನನ್ನ ವಾದದಿಂದ) ಸೋಲಿಸುತ್ತೇನೆ." ಮೊದಲನೆಯವನು: (ಅಲ್ಲಾಹನ ಹೆಸರಿನಲ್ಲಿ) ಪ್ರಮಾಣ ಮಾಡಿ ವಾಗ್ದಾನ ನೀಡಿ, ನಂತರ ಆ ಒಪ್ಪಂದವನ್ನು ಮುರಿದು ದ್ರೋಹ ಎಸಗಿದವನು. ಎರಡನೆಯವನು: ಒಬ್ಬ ಸ್ವತಂತ್ರ ವ್ಯಕ್ತಿಯನ್ನು ಗುಲಾಮನೆಂದು ಸುಳ್ಳು ಹೇಳಿ ಮಾರಿ, ಆ ಹಣವನ್ನು ತಿಂದು, ಅದನ್ನು ಬಳಸಿಕೊಂಡವನು. ಮೂರನೆಯವನು: ಕೆಲಸಕ್ಕಾಗಿ ಒಬ್ಬ ಕೂಲಿಕಾರನನ್ನು ನೇಮಿಸಿಕೊಂಡು, ಅವನಿಂದ ಪೂರ್ತಿ ಕೆಲಸವನ್ನು ಪಡೆದುಕೊಂಡು, ಅವನ ಕೆಲಸದ ಕೂಲಿಯನ್ನು ನೀಡದವನು.

Source
رواه البخاري
Download image

Saved at original quality