Hadith for the World

All hadiths

The complete card collection, filter by chapter

655 hadiths

عن ابن مسعود رضي الله عنه قال: قال رسول الله صلى الله عليه وسلم : «أيُّكم مالُ وارثِه أحَبُّ إليه من مالَه؟» قالوا: يا رسول الله، ما منَّا أحد إلا مَالُه أحَبُّ إليه. قال: «فإن مالَه ما قدَّم، ومالُ وارثِه ما أخَّر».رواه البخاري
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನನ್ನಿಂದ ಒಂದೇ ಒಂದು ವಚನವನ್ನಾದರೂ ತಲುಪಿಸಿ. ಬನೂ ಇಸ್ರಾಯೀಲರಿಂದ ಉಲ್ಲೇಖಿಸಿ, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಯಾರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಾನೋ ಅವನು ನರಕದಲ್ಲಿ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”رواه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ಅಲೆಮಾರಿ ಅರಬ್ಬನು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಹೇಳಿದನು: "ನಾನು ಆ ಕಾರ್ಯವನ್ನು ಮಾಡಿದರೆ ಸ್ವರ್ಗವನ್ನು ಪ್ರವೇಶಿಸುವಂತಹ ಒಂದು ಕಾರ್ಯದ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಹೇಳಿದರು: "ಅಲ್ಲಾಹನನ್ನು ಆರಾಧಿಸು, ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡಬೇಡ, ಕಡ್ಡಾಯ ನಮಾಝನ್ನು ಸಂಸ್ಥಾಪಿಸು, ಕಡ್ಡಾಯ ಝಕಾತನ್ನು ನೀಡು, ರಮದಾನ್ ತಿಂಗಳಲ್ಲಿ ಉಪವಾಸವನ್ನು ಆಚರಿಸು." ಅವನು ಹೇಳಿದನು: "ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಾನು ಇದಕ್ಕಿಂತ ಹೆಚ್ಚಿಗೆ ಏನೂ ಮಾಡುವುದಿಲ್ಲ." ಅವನು ತಿರುಗಿ ಹೋದ ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸ್ವರ್ಗವಾಸಿಗಳಲ್ಲಿ ಸೇರಿದ ವ್ಯಕ್ತಿಯನ್ನು ನೋಡಲು ಸಂತೋಷಪಡುವವರು ಇವನನ್ನು ನೋಡಲಿ."متفق عليه
عن سهل بن سعد الساعدي ـرضي الله عنه- قَالَ رَسُول اللَّه -صَلّى اللهُ عَلَيْهِ وسَلَّم-: «لو كانت الدنيا تَعدل عند الله جَناح بَعوضة، ما سَقَى كافراً منها شَرْبَة ماء».رواه الترمذي
ಅಬೂ ಸಈದ್ ಖುದ್ರಿ ಮತ್ತು ಅಬೂ ಹುರೈರ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಒಬ್ಬ ಮುಸಲ್ಮಾನನಿಗೆ ಆಯಾಸ, ಅನಾರೋಗ್ಯ, ಆತಂಕ, ದುಃಖ, ಹಾನಿ, ಸಂಕಟ ಮುಂತಾದ ಯಾವುದೇ ಸಂಭವಿಸಿದರೂ, ಎಲ್ಲಿಯವರೆಗೆಂದರೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ಸಹ, ಅದಕ್ಕೆ ಪರಿಹಾರವಾಗಿ ಅಲ್ಲಾಹು ಅವನ ಕೆಲವು ಪಾಪಗಳನ್ನು ಅಳಿಸದೆ ಇರುವುದಿಲ್ಲ.”متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಒಬ್ಬ ಮುಸಲ್ಮಾನನಿಗೆ ಇನ್ನೊಬ್ಬ ಮುಸಲ್ಮಾನನ ಮೇಲೆ ಐದು ಹಕ್ಕುಗಳಿವೆ: ಸಲಾಂ ಹೇಳಿದರೆ ಉತ್ತರಿಸುವುದು, ರೋಗಿಯನ್ನು ಭೇಟಿ ಮಾಡುವುದು, ಮೃತದೇಹವನ್ನು ಹಿಂಬಾಲಿಸುವುದು, ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಸೀನಿದರೆ ತಶ್ಮೀತ್ ಮಾಡುವುದು.”متفق عليه
عن أبي مسعود البدري رضي الله عنه قَال: قَالَ رَسُولُ اللَّه -صَلّى اللهُ عَلَيْهِ وسَلَّم-: «حُوسِب رجُل ممن كان قَبْلَكُمْ، فلم يُوجد له من الخَيْر شيء، إلا أنه كان يُخَالط الناس وكان مُوسِراً، وكان يأمُر غِلْمَانَه أن يَتَجَاوَزُوا عن المُعْسِر، قال الله عز وجل : نحن أحَقُّ بذلك منه؛ تَجَاوزُوا عنه».رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಉದಯವಾಗುವ ದಿನಗಳಲ್ಲಿ ಅತಿಶ್ರೇಷ್ಠವಾದ ದಿನ ಜುಮಾ (ಶುಕ್ರವಾರ،) ದಿನ. ಅಂದು ಆದಮರನ್ನು ಸೃಷ್ಟಿಸಲಾಯಿತು, ಅಂದು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸಲಾಯಿತು ಮತ್ತು ಅಂದು ಅವರನ್ನು ಸ್ವರ್ಗದಿಂದ ಹೊರಹಾಕಲಾಯಿತು. ಅಂತ್ಯಸಮಯವು ಶುಕ್ರವಾರವಲ್ಲದೆ ಸಂಭವಿಸುವುದಿಲ್ಲ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಷ್ಟೋ ಬಾಗಿಲುಗಳಿಂದ, ಕೆದರಿದ ಕೂದಲಿನ ದೂಡಲ್ಪಟ್ಟ ವ್ಯಕ್ತಿಗಳಿದ್ದಾರೆ. ಒಂದು ವೇಳೆ ಅವನು ಅಲ್ಲಾಹನ ಮೇಲೆ ಆಣೆಯಿಟ್ಟರೆ, ಅವನು (ಅಲ್ಲಾಹು) ಖಂಡಿತವಾಗಿಯೂ ಅದನ್ನು ಪೂರ್ಣಗೊಳಿಸುತ್ತಾನೆ".رواه مسلم
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸೌಮ್ಯವಾಗಿ ಮಾರಾಟ ಮಾಡುವ, ಖರೀದಿಸುವ ಮತ್ತು ಸಾಲ ಮರುಪಾವತಿಯನ್ನು ಕೇಳುವ ವ್ಯಕ್ತಿಗೆ ಅಲ್ಲಾಹು ದಯೆ ತೋರಲಿ.”رواه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ, ನಂತರ ಮೂಗು ಮಣ್ಣಾಗಲಿ." ಅವರೊಡನೆ ಕೇಳಲಾಯಿತು: “ಓ ಅಲ್ಲಾಹನ ಸಂದೇಶವಾಹಕರೇ! ಯಾರು?" ಅವರು ಉತ್ತರಿಸಿದರು: "ಯಾರು ಬದುಕಿರುವಾಗ ಅವನ ತಂದೆ-ತಾಯಿಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧಾಪ್ಯವನ್ನು ತಲುಪಿಯೂ ಸ್ವರ್ಗವನ್ನು ಪ್ರವೇಶಿಸಲಾಗದವನು."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದ ದಾರಿಯಲ್ಲಿ ಚಲಿಸುತ್ತಿದ್ದರು. ಅವರು ಜುಮ್ದಾನ್ ಎಂಬ ಹೆಸರಿನ ಪರ್ವತದ ಬಳಿಯಿಂದ ಸಾಗಿದಾಗ ಹೇಳಿದರು: "ಮುಂದುವರಿಯಿರಿ. ಇದು ಜುಮ್ದಾನ್. ಮುಫರ್‍ರಿದ್‌ಗಳು (ಅನನ್ಯರು) ಮುಂಚೂಣಿಯಲ್ಲಿದ್ದಾರೆ." ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಮುಫರ್‍ರಿದ್‌ಗಳು ಎಂದರೇನು?" ಅವರು ಉತ್ತರಿಸಿದರು: "ಅಲ್ಲಾಹನನ್ನು ಅತ್ಯಧಿಕ ಸ್ಮರಿಸುವ ಪುರುಷರು ಮತ್ತು ಸ್ತ್ರೀಯರು."رواه مسلم
ಮಅದಾನ್ ಬಿನ್ ಅಬೂ ತಲ್ಹ ಯಅಮರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವತಂತ್ರಗೊಳಿಸಿದ ಗುಲಾಮನಾದ ಸೌಬಾನ್‌ರನ್ನು ಭೇಟಿಯಾಗಿ ಹೇಳಿದೆ: ನನಗೆ ಒಂದು ಕರ್ಮವನ್ನು ತಿಳಿಸಿಕೊಡಿ. ನಾನು ಅದನ್ನು ಮಾಡಿದರೆ ಅದರ ಮೂಲಕ ಅಲ್ಲಾಹು ನನ್ನನ್ನು ಸ್ವರ್ಗಕ್ಕೆ ಪ್ರವೇಶಗೊಳಿಸಬೇಕು. ಅಥವಾ ನಾನು ಹೀಗೆ ಹೇಳಿದೆ: ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮವನ್ನು ತಿಳಿಸಿಕೊಡಿ. ಅವರು ಮೌನವಾದರು. ನಾನು ಪುನಃ ಕೇಳಿದೆ. ಆದರೆ ಅವರು ಮೌನವಾದರು. ನಾನು ಮೂರನೇ ಬಾರಿ ಕೇಳಿದಾಗ ಅವರು ಹೇಳಿದರು: ನಾನು ಇದೇ ವಿಷಯವನ್ನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದ್ದೆ. ಆಗ ಅವರು ಹೀಗೆ ಉತ್ತರಿಸಿದರು: "ಅಲ್ಲಾಹನಿಗೆ ಅತ್ಯಧಿಕವಾಗಿ ಸುಜೂದ್ ಮಾಡಿರಿ. ಏಕೆಂದರೆ ನೀವು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿಮಗೆ ಒಂದುಸ್ಥಾನಯನ್ನು ಏರಿಸುವನು ಮತ್ತು ನಿಮ್ಮಿಂದ ಒಂದು ಪಾಪವನ್ನು ಅಳಿಸುವನು." ಮಅದಾನ್ ಹೇಳಿದರು: ನಂತರ ನಾನು ಅಬೂ ದರ್ದಾಅ್‌ರನ್ನು ಭೇಟಿಯಾಗಿ ಇದೇ ಪ್ರಶ್ನೆಯನ್ನು ಕೇಳಿದೆ. ಅವರು ಕೂಡ ಸೌಬಾನ್ ಹೇಳಿದಂತೆಯೇ ಹೇಳಿದರು.رواه مسلم
عن أبي هريرة رضي الله عنه قال: قال رسول الله صلى الله عليه وسلم : «إذا قَام أحَدُكُم من الليل، فَاسْتَعْجَمَ القرآن على لِسَانه، فلم يَدْرِ ما يقول، فَلْيَضْطَجِع».رواه مسلم
ಸಹ್ಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. (ಆ ದಿನ) 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಲ್ಲುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರೆಲ್ಲರೂ ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ".متفق عليه
عن أبي هريرة رضي الله عنه عن النبي صلى الله عليه وسلم قال: «كان داود -عليه السلام- لا يأكلُ إلا من عمل يده». وعن المقدام بن معد يكرب رضي الله عنه عن النبي صلى الله عليه وسلم قال: «ما أكل أحد طعاما قط خيرا من أن يأكل من عمل يده، وإن نبي الله داود صلى الله عليه وسلم كان يأكل من عمل يده».حديث أبي هريرة رضي الله عنه: رواه البخاري. حديث المقداد رضي الله عنه: رواه البخاري
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಒಬ್ಬ ವ್ಯಕ್ತಿ ಜನರಿಗೆ ಸಾಲ ನೀಡುತ್ತಿದ್ದನು. ಅವನು ತನ್ನ ಸೇವಕನೊಂದಿಗೆ ಹೇಳುತ್ತಿದ್ದನು: “ಸಾಲಗಾರ ದಿವಾಳಿಯಾಗಿದ್ದರೆ ಅವನನ್ನು ಕಡೆಗಣಿಸು. ಬಹುಶ ಅಲ್ಲಾಹು ನಮ್ಮ (ಪಾಪಗಳ) ನ್ನೂ ಕಡೆಗಣಿಸಬಹುದು. ಆದ್ದರಿಂದ, ಅವನು (ಮರಣಾನಂತರ) ಅಲ್ಲಾಹನನ್ನು ಭೇಟಿಯಾದಾಗ ಅಲ್ಲಾಹು ಅವನ ಪಾಪಗಳನ್ನು ಕಡೆಗಣಿಸಿದನು.”متفق عليه
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ ಪರಿಶ್ರಮಿಸದಷ್ಟು ಪರಿಶ್ರಮಿಸುತ್ತಿದ್ದರು."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನನ್ನ ಸಮುದಾಯದ ಎಲ್ಲರನ್ನೂ ಕ್ಷಮಿಸಲಾಗುವುದು, ಬಹಿರಂಗವಾಗಿ ಪಾಪ ಮಾಡುವವರ ಹೊರತು. ಬಹಿರಂಗವಾಗಿ ಪಾಪ ಮಾಡುವ ಒಂದು ರೂಪ ಹೇಗೆಂದರೆ, ಒಬ್ಬ ವ್ಯಕ್ತಿ ರಾತ್ರಿಯಲ್ಲಿ ಒಂದು ಪಾಪವನ್ನು ಮಾಡುತ್ತಾನೆ. ನಂತರ ಅಲ್ಲಾಹು ಅದನ್ನು ಅವನಿಗಾಗಿ ಮುಚ್ಚಿಟ್ಟರೂ, ಮರುದಿನ ಬೆಳಗ್ಗೆ ಅವನು ಹೇಳುತ್ತಾನೆ: "ಓ ಇಂತಿಂತಹವರೇ! ನಾನು ನಿನ್ನೆ ರಾತ್ರಿ ಇಂತಿಂತಹ ಪಾಪ ಮಾಡಿದ್ದೇನೆ. ಅವನ ಪರಿಪಾಲಕನು (ಅಲ್ಲಾಹು) ಅವನ ಪಾಪವನ್ನು ಮುಚ್ಚಿಟ್ಟ ಸ್ಥಿತಿಯಲ್ಲಿ ಅವನು ರಾತ್ರಿಯನ್ನು ಕಳೆದಿದ್ದನು. ಆದರೆ ಬೆಳಗಾದಾಗ ಅವನು ಆ ಮುಚ್ಚಿಗೆಯನ್ನು ತೆರೆದು ಬಿಡುತ್ತಾನೆ."متفق عليه
ಸ'ಅದ್ ಇಬ್ನ್ ಅಬೀ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೆವು. ಆಗ ಅವರು ಹೇಳಿದರು: "ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಗಳಿಸಲು ಸಾಧ್ಯವಿಲ್ಲವೇ?" ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: "ನಮ್ಮಲ್ಲೊಬ್ಬನು ಒಂದು ಸಾವಿರ ಪುಣ್ಯಗಳನ್ನು ಹೇಗೆ ಗಳಿಸಬಹುದು?" ಅವರು (ಪ್ರವಾದಿ) ಹೇಳಿದರು: "ಅವನು ನೂರು ಬಾರಿ ತಸ್ಬೀಹ್ (ಸುಬ್‌ಹಾನಲ್ಲಾಹ್) ಹೇಳುತ್ತಾನೆ. ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ, ಅಥವಾ ಅವನಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ".رواه مسلم
عن ابن مسعود رضي الله عنه قال: قال رسول الله صلى الله عليه وسلم : «لا حَسَدَ إلا في اثنتين: رجل آتاه الله مالا، فسَلَّطَه على هَلَكَتِهِ في الحَقِّ، ورجل آتاه الله حِكْمَة، فهو يقضي بها ويُعَلِّمَها». وعن ابن عمر رضي الله عنهما ، عن النبي صلى الله عليه وسلم قال: «لا حسد إلا في اثنتين: رجل آتاه الله القرآن، فهو يقوم به آناء الليل وآناء النهار، ورجل آتاه الله مالا، فهو ينفقه آناء الليل وآناء النهار».حديث ابن مسعود رضي الله عنه: متفق عليه. حديث ابن عمر رضي الله عنه: متفق عليه
عن أبي هريرة ـ رضي الله عنه ـ قال: قال رسول الله صلى الله عليه وسلم : «لا يَلِجُ النارَ رجُل بَكى من خشية الله حتى يَعود اللَّبنُ في الضَّرْع، ولا يَجتمع غُبَارٌ في سبيل الله وَدُخَانُ جهنم».رواه الترمذي والنسائي وأحمد
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣ ಹೊಂದುವುದಕ್ಕೆ ಮೂರು ದಿನಗಳ ಮೊದಲು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಿಮ್ಮಲ್ಲಿ ಯಾರೂ ಅಲ್ಲಾಹನ ಬಗ್ಗೆ ಒಳ್ಳೆಯ ಭಾವನೆಯನ್ನಿಟ್ಟುಕೊಂಡಲ್ಲದೆ ಮರಣವನ್ನಪ್ಪಬಾರದು."رواه مسلم
ಝುಬೈರ್ ಇಬ್ನುಲ್ ಅವ್ವಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನು ತನ್ನ ಹಗ್ಗವನ್ನು ತೆಗೆದುಕೊಂಡು, ನಂತರ ತನ್ನ ಬೆನ್ನ ಮೇಲೆ ಸೌದೆಯ ಹೊರೆಯೊಂದಿಗೆ ಬಂದು, ನಂತರ ಅದನ್ನು ಮಾರಿ, ಮತ್ತು ಅದರ ಮೂಲಕ ಅಲ್ಲಾಹು ಅವನ ಮುಖವನ್ನು (ಭಿಕ್ಷಾಟನೆಯ ಅವಮಾನದಿಂದ) ಕಾಪಾಡುವುದು, ಅವನು ಜನರಲ್ಲಿ ಬೇಡುವುದಕ್ಕಿಂತ ಉತ್ತಮವಾಗಿದೆ; ಅವರು (ಜನರು) ಅವನಿಗೆ ಕೊಡಲಿ ಅಥವಾ ಕೊಡದಿರಲಿ".رواه البخاري