Hadith for the World
ಫಿಕ್ಹ್ ಮತ್ತು ಉಸುಲ್-ಎ-ಫಿಖ್

Jurisprudence of Acts of Worship

231 hadiths

231 hadiths

ಮಅದಾನ್ ಬಿನ್ ಅಬೂ ತಲ್ಹ ಯಅಮರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ವತಂತ್ರಗೊಳಿಸಿದ ಗುಲಾಮನಾದ ಸೌಬಾನ್‌ರನ್ನು ಭೇಟಿಯಾಗಿ ಹೇಳಿದೆ: ನನಗೆ ಒಂದು ಕರ್ಮವನ್ನು ತಿಳಿಸಿಕೊಡಿ. ನಾನು ಅದನ್ನು ಮಾಡಿದರೆ ಅದರ ಮೂಲಕ ಅಲ್ಲಾಹು ನನ್ನನ್ನು ಸ್ವರ್ಗಕ್ಕೆ ಪ್ರವೇಶಗೊಳಿಸಬೇಕು. ಅಥವಾ ನಾನು ಹೀಗೆ ಹೇಳಿದೆ: ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮವನ್ನು ತಿಳಿಸಿಕೊಡಿ. ಅವರು ಮೌನವಾದರು. ನಾನು ಪುನಃ ಕೇಳಿದೆ. ಆದರೆ ಅವರು ಮೌನವಾದರು. ನಾನು ಮೂರನೇ ಬಾರಿ ಕೇಳಿದಾಗ ಅವರು ಹೇಳಿದರು: ನಾನು ಇದೇ ವಿಷಯವನ್ನು ಅಲ್ಲಾಹನ ಸಂದೇಶವಾಹಕರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದ್ದೆ. ಆಗ ಅವರು ಹೀಗೆ ಉತ್ತರಿಸಿದರು: "ಅಲ್ಲಾಹನಿಗೆ ಅತ್ಯಧಿಕವಾಗಿ ಸುಜೂದ್ ಮಾಡಿರಿ. ಏಕೆಂದರೆ ನೀವು ಅಲ್ಲಾಹನಿಗಾಗಿ ಒಂದು ಸುಜೂದ್ ಮಾಡಿದರೆ, ಅಲ್ಲಾಹು ಅದರಿಂದ ನಿಮಗೆ ಒಂದುಸ್ಥಾನಯನ್ನು ಏರಿಸುವನು ಮತ್ತು ನಿಮ್ಮಿಂದ ಒಂದು ಪಾಪವನ್ನು ಅಳಿಸುವನು." ಮಅದಾನ್ ಹೇಳಿದರು: ನಂತರ ನಾನು ಅಬೂ ದರ್ದಾಅ್‌ರನ್ನು ಭೇಟಿಯಾಗಿ ಇದೇ ಪ್ರಶ್ನೆಯನ್ನು ಕೇಳಿದೆ. ಅವರು ಕೂಡ ಸೌಬಾನ್ ಹೇಳಿದಂತೆಯೇ ಹೇಳಿದರು.رواه مسلم
عن أبي هريرة رضي الله عنه قال: قال رسول الله صلى الله عليه وسلم : «إذا قَام أحَدُكُم من الليل، فَاسْتَعْجَمَ القرآن على لِسَانه، فلم يَدْرِ ما يقول، فَلْيَضْطَجِع».رواه مسلم
ಸಹ್ಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಸ್ವರ್ಗದಲ್ಲಿ 'ರಯ್ಯಾನ್' ಎಂಬ ಒಂದು ಬಾಗಿಲಿದೆ. ಉಪವಾಸ ಆಚರಿಸಿದವರು ಪುನರುತ್ಥಾನ ದಿನದಂದು ಅದರ ಮೂಲಕ ಪ್ರವೇಶಿಸುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. (ಆ ದಿನ) 'ಉಪವಾಸಿಗರು ಎಲ್ಲಿ?' ಎಂದು ಕರೆಯಲಾಗುವುದು. ಆಗ ಅವರು ಎದ್ದು ನಿಲ್ಲುವರು. ಅವರಲ್ಲದೆ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ. ಅವರೆಲ್ಲರೂ ಪ್ರವೇಶಿಸಿದ ನಂತರ ಅದನ್ನು ಮುಚ್ಚಲಾಗುವುದು. ನಂತರ ಬೇರೆ ಯಾರೂ ಅದರ ಮೂಲಕ ಪ್ರವೇಶಿಸುವುದಿಲ್ಲ".متفق عليه
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನಿನ ಕೊನೆಯ ಹತ್ತು ದಿನಗಳಲ್ಲಿ ಇತರ ದಿನಗಳಲ್ಲಿ ಪರಿಶ್ರಮಿಸದಷ್ಟು ಪರಿಶ್ರಮಿಸುತ್ತಿದ್ದರು."رواه مسلم
عن ابن مسعود رضي الله عنه قال: قال رسول الله صلى الله عليه وسلم : «لا حَسَدَ إلا في اثنتين: رجل آتاه الله مالا، فسَلَّطَه على هَلَكَتِهِ في الحَقِّ، ورجل آتاه الله حِكْمَة، فهو يقضي بها ويُعَلِّمَها». وعن ابن عمر رضي الله عنهما ، عن النبي صلى الله عليه وسلم قال: «لا حسد إلا في اثنتين: رجل آتاه الله القرآن، فهو يقوم به آناء الليل وآناء النهار، ورجل آتاه الله مالا، فهو ينفقه آناء الليل وآناء النهار».حديث ابن مسعود رضي الله عنه: متفق عليه. حديث ابن عمر رضي الله عنه: متفق عليه
عن أبي هريرة ـ رضي الله عنه ـ قال: قال رسول الله صلى الله عليه وسلم : «لا يَلِجُ النارَ رجُل بَكى من خشية الله حتى يَعود اللَّبنُ في الضَّرْع، ولا يَجتمع غُبَارٌ في سبيل الله وَدُخَانُ جهنم».رواه الترمذي والنسائي وأحمد
عن أبي هريرة رضي الله عنه قال: قال رسول الله صلى الله عليه وسلم : «مَا يَجِدُ الشَّهيد من مَسِّ القتل إلا كما يَجِدُ أَحَدُكُمْ من مَسِّ القَرْصَةِ».رواه الترمذي وابن ماجه والنسائي والدارمي وأحمد
عن أبي هريرة رضي الله عنه قال: قيل: يا رسول الله، ما يعدل الجهاد في سبيل الله؟ قال: «لا تستطيعونه» فأعادوا عليه مرتين أو ثلاثًا كل ذلك يقول: «لا تستطيعونه»! ثم قال: «مثل المجاهد في سبيل الله كمثل الصائم القائم القانت بآيات الله لا يَفْتُرُ من صيام، ولا صلاة، حتى يرجع المجاهد في سبيل الله». وفي رواية البخاري: أن رجلاً قال: يا رسول الله، دلني على عمل يعْدِلُ الجهاد؟ قال: «لا أجده» ثم قال: «هل تستطيع إذا خرج المجاهد أن تدخل مسجدك فتقوم ولا تفتر، وتصوم ولا تفطر»؟ فقال: «ومن يستطيع ذلك؟!»متفق عليه، والرواية الثانية للبخاري
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿ ನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಬೂ ಸಈದ್, ಯಾರು ಅಲ್ಲಾಹುವನ್ನು ಪರಿಪಾಲಕನೆಂದು, ಇಸ್ಲಾಮನ್ನು ಧರ್ಮವೆಂದು, ಮತ್ತು ಮುಹಮ್ಮದ್ ರನ್ನು ಪ್ರವಾದಿಯೆಂದು (ಒಪ್ಪಿಕೊಂಡು) ತೃಪ್ತರಾಗುತ್ತಾರೋ, ಅವರಿಗೆ ಸ್ವರ್ಗವು ಖಚಿತವಾಯಿತು". ಇದನ್ನು ಕೇಳಿ ಅಬೂ ಸಈದ್‌ಗೆ ಆಶ್ಚರ್ಯವಾಯಿತು. ಅವರು ಹೇಳಿದರು: "ಓ ಅಲ್ಲಾಹುವಿನ ಸಂದೇಶವಾಹಕರೇ, ಇದನ್ನು ನನಗೆ ಮತ್ತೊಮ್ಮೆ ಹೇಳಿ". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹಾಗೆಯೇ ಮಾಡಿದರು (ಮತ್ತೊಮ್ಮೆ ಹೇಳಿದರು). ನಂತರ ಹೇಳಿದರು: "ಮತ್ತು ಇನ್ನೊಂದು (ವಿಷಯ) ಇದೆ. ಅದರ ಮೂಲಕ ದಾಸನನ್ನು ಸ್ವರ್ಗದಲ್ಲಿ ನೂರು ಹಂತಗಳಷ್ಟು ಎತ್ತರಿಸಲಾಗುತ್ತದೆ. ಪ್ರತಿಯೆರಡು ಹಂತಗಳ ನಡುವಿನ ಅಂತರವು ಆಕಾಶ ಮತ್ತು ಭೂಮಿಯ ನಡುವಿನ ಅಂತರದಷ್ಟಿರುತ್ತದೆ". ಅಬೂ ಸಈದ್ ಕೇಳಿದರು: "ಅದು ಯಾವುದು, ಓ ಅಲ್ಲಾಹುವಿನ ಸಂದೇಶವಾಹಕರೇ?". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹುವಿನ ಮಾರ್ಗದಲ್ಲಿ ಜಿಹಾದ್ ಮಾಡುವುದು (ಶ್ರಮಿಸುವುದು/ಹೋರಾಡುವುದು), ಅಲ್ಲಾಹುವಿನ ಮಾರ್ಗದಲ್ಲಿ ಜಿಹಾದ್ ಮಾಡುವುದು".رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್‌ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”متفق عليه
وعن سالم بن عبد الله بن عمر بن الخطاب رضي الله عنهم عن أبيه: أن رسول الله صلى الله عليه وسلم قال: « نِعْمَ الرَّجُلُ عبد الله، لو كان يُصلِّي من الليل» قال سالم: فكان عبد الله بعد ذلك لا يَنامُ من الليل إلا قليلًا.متفق عليه
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನ ಮಾರ್ಗದಲ್ಲಿ ಒಂದು ದಿನ ಉಪವಾಸವನ್ನು ಆಚರಿಸುತ್ತಾನೋ, ಅಲ್ಲಾಹು ಅವನ ಮುಖವನ್ನು ನರಕದಿಂದ ಎಪ್ಪತ್ತು ಶರತ್ಕಾಲಗಳಷ್ಟು ದೂರ ಮಾಡುತ್ತಾನೆ."متفق عليه
ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರು ಉಪವಾಸವನ್ನು ಬೇಗನೆ ತೊರೆಯುವವರೆಗೆ ಅವರು ಒಳಿತಿನಲ್ಲಿರುತ್ತಾರೆ."متفق عليه
ಝೈದ್ ಬಿನ್ ಸಾಬಿತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಾವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆ ಸಹರಿ ಸೇವಿಸಿದೆವು. ನಂತರ ಅವರು ನಮಾಝ್ ಮಾಡಲು ನಿಂತರು. ನಾನು ಕೇಳಿದೆ: 'ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಸಮಯವಿತ್ತು?' ಅವರು ಹೇಳಿದರು: 'ಸುಮಾರು ಐವತ್ತು ಆಯತ್‌ಗಳಷ್ಟು.'"متفق عليه
ಸತ್ಯವಿಶ್ವಾಸಿಗಳ ಮಾತೆ ಮತ್ತು ಪ್ರವಾದಿಪತ್ನಿ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಅಲ್ಲಾಹು ಮರಣವನ್ನು ನೀಡುವವರೆಗೆ ಈತಿಕಾಫ್ (ಏಕಾಂತ ಆರಾಧನೆ) ಮಾಡುತ್ತಿದ್ದರು. ಅವರ ನಂತರ ಅವರ ಪತ್ನಿಯರು ಈತಿಕಾಫ್ ಕೂರುತ್ತಿದ್ದರು."متفق عليه
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನೀವು ಸಹರಿ ಸೇವಿಸಿರಿ, ಏಕೆಂದರೆ ಸಹರಿಯಲ್ಲಿ ಸಮೃದ್ಧಿ (ಬರಕತ್) ಇದೆ."متفق عليه
ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಜನರು ಗುಂಪುಗೂಡಿ ಒಬ್ಬ ವ್ಯಕ್ತಿಗೆ ನೆರಳು ನೀಡುತ್ತಿರುವುದನ್ನು ಕಂಡರು. ಅವರು (ಪ್ರವಾದಿ) ಕೇಳಿದರು: "ಇದೇನು?". ಜನರು ಹೇಳಿದರು: "ಆತ ಉಪವಾಸದಲ್ಲಿದ್ದಾನೆ". ಆಗ ಅವರು (ಪ್ರವಾದಿ) ಹೇಳಿದರು: "ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ". ಇಮಾಮ್ ಮುಸ್ಲಿಂ ರವರ ಇನ್ನೊಂದು ವರದಿಯಲ್ಲಿ ಹೀಗಿದೆ: "ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು ಸ್ವೀಕರಿಸಿಕೊಳ್ಳಿರಿ".متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನೀವು ರಮದಾನ್‌ಗಿಂತ ಒಂದು ಅಥವಾ ಎರಡು ದಿನಗಳ ಮೊದಲು ಉಪವಾಸ ಆಚರಿಸಬಾರದು. ಆದರೆ ವಾಡಿಕೆಯ ಉಪವಾಸವನ್ನು ಆಚರಿಸುವವನ ಹೊರತು. ಅವನು ಅದನ್ನು ಆಚರಿಸಬಹುದು."متفق عليه
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಿತ್ರ್ ಝಕಾತನ್ನು ಒಂದು ಸಾಅ್ ಖರ್ಜೂರ ಅಥವಾ ಒಂದು ಸಾಅ್ ಬಾರ್ಲಿಯಂತೆ ಗುಲಾಮರು, ಸ್ವತಂತ್ರರು, ಪುರುಷರು, ಸ್ತ್ರೀಯರು, ಕಿರಿಯರು, ಹಿರಿಯರು ಮುಂತಾದ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯಗೊಳಿಸಿದರು. ಜನರು ನಮಾಝ್‌ಗೆ ಹೊರಡುವ ಮೊದಲು ಅದನ್ನು ನೀಡಬೇಕೆಂದು ಅವರು ಆದೇಶಿಸಿದರು."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಮುಸ್ಲಿಂ ಮಹಿಳೆ ತನ್ನ ಮಹ್ರಮ್ (ಹತ್ತಿರದ ಪುರುಷ ಸಂಬಂಧಿ) ಇಲ್ಲದೆ ಒಂದು ರಾತ್ರಿಯ ದೂರ ಪ್ರಯಾಣಿಸುವುದು ಅನು ಮತಿಸಲಾಗುವುದಿಲ್ಲ."متفق عليه
عن عائشة وأم سلمة رضي الله عنهما «أن رسول الله صلى الله عليه وسلم كان يُدْرِكُهُ الفجر وهو جُنٌبٌ من أهله، ثم يغتسل ويصوم ».متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ಉಪವಾಸದಲ್ಲಿದ್ದಾಗ ಮರೆತು ತಿಂದರೆ ಅಥವಾ ಕುಡಿದರೆ, ಅವನು ತನ್ನ ಉಪವಾಸವನ್ನು ಪೂರ್ಣಗೊಳಿಸಲಿ. ಏಕೆಂದರೆ ಅಲ್ಲಾಹನೇ ಅವನಿಗೆ ಆಹಾರ ಮತ್ತು ಪಾನೀಯವನ್ನು ನೀಡಿದ್ದಾನೆ."متفق عليه
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನನ್ನ ಗೆಳೆಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಮೂರು ವಿಷಯಗಳ ಉಪದೇಶ ಮಾಡಿದರು: ಪ್ರತೀ ತಿಂಗಳಲ್ಲಿ ಮೂರು ದಿನ ಉಪವಾಸ ಆಚರಿಸುವುದು, ಎರಡು ರಕ್‌ಅತ್ ದುಹಾ ನಮಾಝ್ ನಿರ್ವಹಿಸುವುದು ಮತ್ತು ಮಲಗುವುದಕ್ಕೆ ಮೊದಲು ವಿತ್ರ್ ನಮಾಝ್ ನಿರ್ವಹಿಸುವುದು."متفق عليه