Hadith for the World
ಸದ್ಗುಣಗಳು ಮತ್ತು ನಡವಳಿಕೆಗಳು

Virtues

64 hadiths

64 hadiths

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ. ಯಾರು ಕಷ್ಟದಲ್ಲಿರುವವರಿಗೆ ಸುಲಭಗೊಳಿಸುತ್ತಾನೋ, ಅಲ್ಲಾಹು ಅವನಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಲಭಗೊಳಿಸುತ್ತಾನೆ. ಯಾರು ಒಬ್ಬ ಮುಸ್ಲಿಮನ ನ್ಯೂನತೆಗಳನ್ನು ಮುಚ್ಚಿಡುತ್ತಾನೋ, ಅಲ್ಲಾಹು ಅವನ ನ್ಯೂನತೆಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಮುಚ್ಚಿಡುತ್ತಾನೆ. ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವ ತನಕ ಅಲ್ಲಾಹನು ದಾಸನಿಗೆ ಸಹಾಯ ಮಾಡುತ್ತಾನೆ. ಯಾರು ಜ್ಞಾನವನ್ನು ಹುಡುಕುತ್ತಾ ಒಂದು ದಾರಿಯನ್ನು ತುಳಿಯುತ್ತಾನೋ, ಅಲ್ಲಾಹು ಅವನಿಗೆ ಸ್ವರ್ಗಕ್ಕೆ ದಾರಿಯನ್ನು ಸುಲಭಗೊಳಿಸುತ್ತಾನೆ. ಒಂದು ಗುಂಪು ಜನರು ಅಲ್ಲಾಹನ ಮನೆಗಳ (ಮಸೀದಿಗಳ) ಪೈಕಿ ಒಂದರಲ್ಲಿ ಅಲ್ಲಾಹನ ಗ್ರಂಥವನ್ನು ಪಠಿಸಲು, ಮತ್ತು ಅದನ್ನು ತಮ್ಮ ನಡುವೆ ಅಧ್ಯಯನ ಮಾಡಲು ಒಟ್ಟುಗೂಡುತ್ತಾರೆ ಎಂದಾದರೆ, ಅವರ ಮೇಲೆ ಶಾಂತಿ ಇಳಿಯುತ್ತದೆ, ಕರುಣೆಯು ಅವರನ್ನು ಆವರಿಸುತ್ತದೆ, ದೇವದೂತರುಗಳು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅಲ್ಲಾಹು ತನ್ನ ಹತ್ತಿರವಿರುವವರಿಗೆ ಅವರ ಬಗ್ಗೆ ತಿಳಿಸುತ್ತಾನೆ. ಯಾರ ಕರ್ಮಗಳು ಅವನನ್ನು ನಿಧಾನಗೊಳಿಸುತ್ತವೆಯೋ, ಅವನ ವಂಶವು ಅವನನ್ನು ಮುಂದಕ್ಕೆ ಒಯ್ಯುವುದಿಲ್ಲ."رواه مسلم
ಅಗರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) - ಇವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಲ್ಲಿ ಒಬ್ಬರಾಗಿದ್ದರು - ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಜನರೇ, ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡಿರಿ. ಏಕೆಂದರೆ ನಾನು ದಿನಕ್ಕೆ ನೂರು ಬಾರಿ ಅವನ ಕಡೆಗೆ ಪಶ್ಚಾತ್ತಾಪ ಪಡುತ್ತೇನೆ."رواه مسلم
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅವರ ಪರಿಪಾಲಕನಿಂದ (ಅಲ್ಲಾಹನಿಂದ) ವರದಿ ಮಾಡುತ್ತಾ ಹೇಳುತ್ತಾರೆ: "ಒಬ್ಬ ದಾಸ ಪಾಪವನ್ನು ಮಾಡಿ ನಂತರ ಹೇಳುತ್ತಾನೆ: "ಓ ಅಲ್ಲಾಹ್! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ." ನಂತರ, ಆ ದಾಸ ಮತ್ತೆ ಪಾಪ ಮಾಡಿ, ನಂತರ ಹೇಳುತ್ತಾನೆ: "ಓ ನನ್ನ ಪರಿಪಾಲಕನೇ! ನನ್ನ ಪಾಪವನ್ನು ಕ್ಷಮಿಸು." ಆಗ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ನನ್ನ ದಾಸ ಪಾಪ ಮಾಡಿದ್ದಾನೆ ಮತ್ತು ಪಾಪಗಳನ್ನು ಕ್ಷಮಿಸುವ ಹಾಗೂ ಪಾಪಗಳಿಗೆ ಶಿಕ್ಷೆ ನೀಡುವ ಒಬ್ಬ ಪರಿಪಾಲಕನಿದ್ದಾನೆ ಎಂದು ಅವನು ತಿಳಿದಿದ್ದಾನೆ. ನಿನಗೆ ಇಷ್ಟವಿರುವುದನ್ನು ಮಾಡು. ನಾನಂತೂ ನಿನ್ನನ್ನು ಕ್ಷಮಿಸಿದ್ದೇನೆ."متفق عليه
ಜುಬೈರ್ ಬಿನ್ ಮುತ್‌ಇಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಕುಟುಂಬ ಸಂಬಂಧ ಕಡಿಯುವವನು ಸ್ವರ್ಗವನ್ನು ಪ್ರವೇಶಿಸುವುದಿಲ್ಲ.”متفق عليه
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರು ತನ್ನ ಜೀವನೋಪಾಯವು ವಿಶಾಲವಾಗಲು ಮತ್ತು ತನ್ನ ಆಯುಷ್ಯವು ದೀರ್ಘವಾಗಲು ಬಯಸುತ್ತಾನೋ ಅವನು ಕುಟುಂಬ ಸಂಬಂಧಗಳನ್ನು ಜೋಡಿಸಲಿ.”متفق عليه
عن أبي أمامة رضي الله عنه قال: سمعتُ رسولَ اللهِ صلى الله عليه وسلم يقولُ: «اقْرَؤُوا القرْآنَ؛ فَإنَّهُ يَأتِي يَوْمَ القِيَامَةِ شَفِيعًا لأَصْحَابِهِ».رواه مسلم
عن أبي ذر الغفاري رضي الله عنه عن النبي صلى الله عليه وسلم قال: «ألاَ أُخْبِرُكَ بِأَحَبِّ الكَلاَمِ إِلَى اللهِ؟ إنَّ أَحَبَّ الكلام إِلى الله: سبحان اللهِ وبحمدِهِ».رواه مسلم
عن أبي هريرة رضي الله عنه مرفوعاً: «والذي نفسي بيده، لو لم تذنبوا، لذهب الله بكم، وجاء بقوم يُذْنِبُونَ، فيستغفرون اللهَ تعالى، فيغفر لهم».رواه مسلم
عن أبي سعيد الخدري رضي الله عنه قال: قال رسول الله صلى الله عليه وسلم : "الْبَاقِيَاتُ الصَّالِحَاتُ، لَا إلَهَ إلَّا اللَّهُ، وَسُبْحَانَ اللَّهِ، وَاَللَّهُ أَكْبَرُ، وَالْحَمْدُ لِلَّهِ، وَلَا حَوْلَ وَلَا قُوَّةَ إلَّا بِاَللَّهِ".رواه ابن حبان والحاكم، أما النسائي فرواه في الكبرى لكن من حديث أبي هريرة
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಪ್ರಾರ್ಥನೆಯೇ ಆರಾಧನೆ." ನಂತರ ಅವರು ಪಠಿಸಿದರು: “ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದನು: ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ, ನಾನು ನಿಮಗೆ ಉತ್ತರ ನೀಡುತ್ತೇನೆ. ನನ್ನನ್ನು ಆರಾಧಿಸಲು ಯಾರು ಅಹಂಕಾರ ತೋರುತ್ತಾರೋ ಅವರು ನಿಂದನೀಯ ಸ್ಥಿತಿಯಲ್ಲಿ ನರಕವನ್ನು ಪ್ರವೇಶಿಸುವರು.”رواه أبو داود والترمذي وابن ماجه وأحمد
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹನ ದೃಷ್ಟಿಯಲ್ಲಿ ಪ್ರಾರ್ಥನೆಗಿಂತಲೂ ಹೆಚ್ಚು ಗೌರವಾರ್ಹವಾದ ಬೇರೆ ವಿಷಯವಿಲ್ಲ.”رواه الترمذي وابن ماجه وأحمد
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ದಿನಕ್ಕೆ ನೂರು ಬಾರಿ ‘ಸುಬ್‌ಹಾನಲ್ಲಾಹಿ ವಬಿಹಮ್ದಿಹೀ’ ಎಂದು ಹೇಳುತ್ತಾರೋ, ಅವರ ಪಾಪಗಳು ಸಮುದ್ರದ ನೊರೆಯಷ್ಟೇ ಇದ್ದರೂ ಸಹ ಅಳಿಸಿಹೋಗುತ್ತವೆ."متفق عليه
ಮುಆವಿಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಲ್ಲಾಹು ಯಾರಿಗೆ ಒಳಿತನ್ನು ಬಯಸುತ್ತಾನೋ ಅವನಿಗೆ ಧಾರ್ಮಿಕ ವಿಷಯಗಳಲ್ಲಿ ಪಾಂಡಿತ್ಯವನ್ನು ನೀಡುತ್ತಾನೆ. ನಾನು ಕೇವಲ ಹಂಚುವವನು ಮಾತ್ರ. ಕೊಡುವವನು ಅಲ್ಲಾಹು. ಈ ಸಮುದಾಯವು ಅಲ್ಲಾಹನ ನಿಯಮಗಳನ್ನು ಅನುಸರಿಸುತ್ತಲೇ ಇರುವುದು, ಅವರನ್ನು ವಿರೋಧಿಸುವವರು ಅವರಿಗೆ ಯಾವುದೇ ತೊಂದರೆ ಮಾಡಲಾರರು, ಅಲ್ಲಾಹನ ಆಜ್ಞೆ ಜಾರಿಗೆ ಬರುವ ತನಕ."متفق عليه
ಅಬ್ದುಲ್ಲಾ ಬಿನ್ ಸಲಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಆಗಮಿಸಿದಾಗ ಜನರೆಲ್ಲರೂ, "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು, ಅಲ್ಲಾಹನ ಸಂದೇಶವಾಹಕರು ಬಂದರು" ಎಂದು ಮೂರು ಸಲ ಕೂಗುತ್ತಾ ಅವರ ಸುತ್ತಲೂ ನೆರೆದರು. ನಾನು ಕೂಡ ಜನರೊಂದಿಗೆ ಅವರನ್ನು ನೋಡಲು ಬಂದೆ. ನಾನು ಅವರ ಮುಖವನ್ನು ಸ್ಪಷ್ಟವಾಗಿ ನೋಡಿದಾಗ ಅವರ ಮುಖವು ಸುಳ್ಳುಗಾರನ ಮುಖವಲ್ಲ ಎಂದು ನನಗೆ ಮನವರಿಕೆಯಾಯಿತು. ನಾನು ಅವರಿಂದ ಆಲಿಸಿದ ಪ್ರಪ್ರಥಮ ವಾಕ್ಯವು ಅವರ ಈ ಮಾತಾಗಿತ್ತು: "ಓ ಜನರೇ! ಸಲಾಂ ಹೇಳುವುದನ್ನು ವ್ಯಾಪಕಗೊಳಿಸಿರಿ, ಆಹಾರವನ್ನು ಉಣಿಸಿರಿ, ಕುಟುಂಬ ಸಂಬಂಧಗಳನ್ನು ಜೋಡಿಸಿರಿ, ಮತ್ತು ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವಾಗ ನಮಾಝ್ ಮಾಡಿರಿ. ನೀವು ಸುರಕ್ಷಿತವಾಗಿ ಸ್ವರ್ಗವನ್ನು ಪ್ರವೇಶಿಸುವಿರಿ."رواه الترمذي وابن ماجه وأحمد
عن علي رضي الله عنه قال: سمعتُ رسولَ اللهِ صلى الله عليه وسلم يقول: « مَا مِنْ مُسْلِم يَعُودُ مُسْلِماً غُدْوة إِلاَّ صَلَّى عَلَيْهِ سَبْعُونَ ألْفَ مَلَكٍ حَتَّى يُمْسِي، وَإنْ عَادَهُ عَشِيَّةً إِلاَّ صَلَّى عَلَيْهِ سَبْعُونَ ألْفَ مَلَكٍ حَتَّى يُصْبحَ، وَكَانَ لَهُ خَرِيفٌ في الْجَنَّةِ».رواه أبو داود والترمذي وابن ماجه وأحمد
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ."رواه الترمذي
عن أبي هريرة رضي الله عنه عن رسول الله صلى الله عليه وسلم قال: «النَّاسُ مَعَادِن كَمَعَادِن الذَّهَب وَالفِضَّة، خِيَارُهُم فِي الجَاهِلِيَّة خِيَارُهُم فِي الإِسْلاَم إِذَا فَقُهُوا، والأَرْوَاحُ جُنُودٌ مُجَنَّدَة، فَمَا تَعَارَفَ مِنْهَا ائتَلَفَ، وَمَا تَنَاكَرَ مِنْهَا اخْتَلَفَ». وعن أبي هريرة رضي الله عنه قال: قال رسول الله -صلى الله عليه وسلم: «تَجِدُون النَّاسَ مَعَادِن: خِيَارُهُم فِي الجَاهِليَّة خِيَارُهُم فِي الإِسْلاَم إِذَا فَقِهُوا، وَتَجِدُون خِيَار النَّاس فِي هَذَا الشَّأْن أَشَدُّهُم كَرَاهِيَة لَه، وَتَجِدُون شَرَّ النَّاس ذَا الوَجْهَين، الَّذِي يَأْتِي هَؤُلاَء بِوَجه، وَهَؤُلاَء بِوَجْه».الحديث الأول: متفق عليه، ولفظه لمسلم؛ وروى البخاري أوله، وروى آخره عن عائشة -رضي الله عنها-. الحديث الثاني: متفق عليه
عن أنس بن مالك وأبي هريرة رضي الله عنهما عن النبي صلى الله عليه وسلم فيما يرويه عن ربه عز وجل قال: «إذا تَقَرَّبَ العبدُ إليَّ شِبْرًا تَقَرَّبْتُ إليه ذِرَاعًا، وإذا تَقَرَّبَ إليَّ ذِرَاعًا تَقَرَّبْتُ مِنْهُ بَاعًا، وإذا أتاني يمشي أَتَيْتُهُ هَرْوَلَةً».حديث أنس -رضي الله عنه- رواه البخاري . حديث أبي هريرة -رضي الله عنه- متفق عليه
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಒಬ್ಬ ವ್ಯಕ್ತಿ ಒಂದು ದಾರಿಯಲ್ಲಿ ನಡೆಯುತ್ತಿದ್ದಾಗ, ದಾರಿಯಲ್ಲಿ ಒಂದು ಮುಳ್ಳಿನ ಕೊಂಬೆಯನ್ನು ಕಂಡನು. ಅವನು ಅದನ್ನು (ದಾರಿಯಿಂದ) ದೂರ ಸರಿಸಿದನು. ಆಗ ಅಲ್ಲಾಹು ಅವನ ಕಾರ್ಯವನ್ನು ಮೆಚ್ಚಿಕೊಂಡು ಅವನ ಪಾಪಗಳನ್ನು ಕ್ಷಮಿಸಿದನು".متفق عليه
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು."رواه الترمذي وابن ماجه وأحمد
عن أبي هريرة رضي الله عنه مرفوعاً: «يقول اللهُ: إذا أراد عبدي أنْ يعملَ سيئةً، فلا تكتبوها عليه حتى يعملَها، فإنْ عَمِلها فاكتبوها بمثلِها، وإنْ تركها مِن أجلي فاكتبوها له حسنةً، وإذا أراد أنْ يعملَ حسنةً فلم يعملها فاكتبوها له حسنةً، فإنْ عملها فاكتبوها له بعشر أمثالها إلى سبعِ مائة ضِعْفٍ».متفق عليه
عن أبي هريرة رضي الله عنه قال: قال رسول الله صلى الله عليه وسلم : «من قتل وَزَغَةً فِي أَوَّلِ ضَرْبَةٍ فله كذا وكذا حسنة، ومن قتلها في الضَّرْبَةِ الثانية فله كذا وكذا حسنة دون الأولى، وإن قتلها في الضربة الثالثة فله كذا وكذا حسنة». وفي رواية: «من قتل وَزَغًا في أول ضربة كتب له مائة حسنة، وفي الثانية دون ذلك، وفي الثالثة دون ذلك».رواه مسلم
عن أبي سعيد الخُدْرِي رضي الله عنه قال: جاءت امرأة إلى رسول الله صلى الله عليه وسلم فقالت: يا رسول الله، ذهب الرجال بِحَدِيثِكَ، فاجْعَل لنَا من نَفْسِك يومًا نَأتِيكَ فيه تُعَلِّمُنَا مما عَلَّمَكَ الله، قال: «اجْتَمِعْنَ يَوَم كَذَا وكَذَا» فَاجْتَمَعْنَ، فأتَاهُنَّ النبي صلى الله عليه وسلم فَعَلَّمَهُنَّ مما عَلَّمَهُ الله، ثم قال: «ما مِنْكُنَّ من امرأة تُقَدِّمُ ثَلاَثَة من الولد إلا كانوا حِجَابًا من النَّارِ» فقالت امرأة: واثنين؟ فقال رسول الله صلى الله عليه وسلم : «واثنين».متفق عليه
عن أبي ذر رضي الله عنه قال: قيل لرسول الله صلى الله عليه وسلم : أرأيت الرَّجل الذي يعمل العمل من الخَير، ويَحمدُه الناس عليه؟ قال: «تلك عاجِل بُشْرَى المؤمن».رواه مسلم